ಪ್ರಾರಂಭದಿಂದಲೇ ’45’ ಸಿನಿಮಾ ತನ್ನ ಹೈಕ್ವಾಲಿಟಿ ಮೇಕಿಂಗ್ ಮತ್ತು ಗ್ರಾಫಿಕಲ್ ಶ್ರೀಮಂತಿಕೆಯಿಂದ ಪ್ರೇಕ್ಷಕರನ್ನ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ರಿಲೀಸ್ ಆಗಿರೋ ’45’ ಚಿತ್ರದ ಬ್ರಾಂಡ್ ನ್ಯೂ ಟ್ರೈಲರ್ ಕೂಡ ವರ್ಷದ ಕೊನೆಯ ಸಿನಿಮಾಜಾತ್ರೆಗೆ ಹೊಸ ಕಿಕ್ ಕೊಡ್ತಿದೆ. ಅನೇಕ ಕುತೂಹಲಗಳ ಖಜಾನೆಯಂತಿರೋ ’45’ ಟ್ರೈಲರ್ನಲ್ಲಿ ತ್ರಿಮೂರ್ತಿಗಳ ದರ್ಬಾರ್ ಜೋರಾಗೆ ಇದೆ.
ಇಲ್ಲಿ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಹೆಣ್ಣಿನ ಗೆಟಪ್ ಹಾಕಿರೋದೇ ಟ್ರೈಲರ್ ಹೈಲೇಟ್. ಉಪ್ಪಿ ಚೆಲುವೆಯ ನೋಟ ಚೆನ್ನ ಅಂತ ಶಿವಣ್ಣನಿಗೆ ವೆಲ್ಕಮ್ ಮಾಡ್ತಿರೋದು ಫ್ಯಾನ್ಸ್ ಗೆ ಇಷ್ಟವಾಗುತ್ತೆ. ರಾಜ್.ಬಿ.ಶೆಟ್ಟಿ ಒಬ್ಬ ಕಾಮನ್ ಮ್ಯಾನ್ ಆಗಿ ಗಮನ ಸೆಳೆತಿದಾರೆ. ಸಿನಿಮಾ ಶೂಟಿಂಗ್ ಮುಂಚೆಯೇ ಸಾಕಷ್ಟು ಪೂರ್ವ ತಯಾರಿಗಳನ್ನು ಮಾಡಿಕೊಂಡು ಅನಿಮೇಷನ್ ಮೂಲಕ ಕಥೆ ಹೇಳಿದ್ದ ಅರ್ಜುನ್ ಜನ್ಯ, ನಿರ್ದೇಶಕನಾಗಿ ಟ್ರೈಲರ್ ಮೊದಲ ನೋಟದಲ್ಲೇ ಗೆದ್ದಿದ್ದಾರೆ ಎನ್ನಬಹುದು.
ಒಂದು ಗಟ್ಟಿ ಗೆಲುವಿಗಾಗಿ ಕಾಯ್ತಿರೋ ನಿರ್ಮಾಪಕ ರಮೇಶ್ ರೆಡ್ಡಿ ಕ್ವಾಲಿಟಿಯಲ್ಲಿ ಎಲ್ಲೂ ಕಾಂಪ್ರಮೈಸ್ ಮಾಡಿಕೊಂಡಂತೆ ಕಾಣಲ್ಲ. ವರ್ಷದ ಕೊನೆಯ ಸಿನಿಮಾ ಸಂಭ್ರಮಕ್ಕೆ ’45’ ಬಿಗ್ ಬ್ಲಾಸ್ಟ್ ಆಗೋ ಮುನ್ಸೂಚನೆ ಸಿಕ್ಕಿದೆ.
ಬೆಂಗಳೂರಿನ ಶ್ರೀನಿವಾಸನಗರದ ಗ್ರೌಂಡ್ ನಲ್ಲಿ ನಡೆದ ’45’ ಟ್ರೈಲರ್ ಲಾಂಚ್ ಈ ಸಡಗರವನ್ನ ಡಬಲ್ ಮಾಡಿತ್ತು. ಬೇರೆ ಕಡೇಗಳಲ್ಲೂ ನೇರಪ್ರಸಾರವಾಗಿದ್ದು, ಫ್ಯಾನ್ಸ್ ಟ್ರೈಲರ್ ಬಿಡುಗಡೆಯನ್ನ ನೋಡಿ ಕಣ್ತುಂಬಿಕೊಂಡ್ರು. ಶಿವಣ್ಣ,ಉಪೇಂದ್ರ ಹಾಗೂ ರಾಜ್ ಶೆಟ್ಟಿ ವಿಭಿನ್ನ ಅವತಾರವನ್ನ ನೋಡಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿಬಿಟ್ರು. ’45’ ಸಿನಿಮಾ ಟ್ರೈಲರ್ 45 ಲಕ್ಷ ವೀಕ್ಷಣೆ ಪಡೆದು ಮುನ್ನುಗ್ತಿರೋದೇ ಈ ಬ್ಯಾಷ್ ಗೆ ಸಾಕ್ಷಿ.
ಡಿ.25ಕ್ಕೆ ‘ಮಾರ್ಕ್’ ಜೊತೆಗೆ ’45’ ರಿಲೀಸ್ ಆಗ್ತಿದ್ದು, ಸಿನಿಮಾ ಸ್ಪರ್ಧೆಯ ಬಿಸಿ ಹೆಚ್ಚಾಗಿದೆ. ’45’ ಟ್ರೈಲರ್ ಮೇಕಿಂಗ್ ಈ ಲೆವೆಲ್ಗೆ ಇರಬೇಕಾದರೆ, ಸಿನಿಮಾ ಯಾವ ರೇಂಜಿಗೆ ಹೋಗಬಹುದು ಎಂಬ ಕಾತುರತೆ ಡಬಲ್ ಆಗಿರೋದು ಸುಳ್ಳಲ್ಲ.
ಮಾವಳ್ಳಿ ಕಾರ್ತಿಕ್. ಫಿಲಂ ಡೆಸ್ಕ್. ಕರ್ನಾಟಕ ನ್ಯೂಸ್ ಬೀಟ್.



















