ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ, ಬೆಂಗಳೂರಿನಲ್ಲಿರುವ ಕೇಂದ್ರೀಯ ವಿದ್ಯುತ್ ಸಂಶೋಧನಾಲಯ ಸಂಸ್ಥೆಯಲ್ಲಿ (CPRI Recruitment 2025) ಖಾಲಿ ಇರುವ 44 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಸೈಂಟಿಫಿಕ್ ಅಸಿಸ್ಟಂಟ್, ಟೆಕ್ನಿಶಿಯನ್ ಸೇರಿ ವಿವಿಧ ವಿಭಾಗಗಳಲ್ಲಿ 44 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಮೇ 25ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು cpri.res.in ಗೆ ಭೇಟಿ ನೀಡಬಹುದಾಗಿದೆ.
ಯಾವ ಹುದ್ದೆ ಎಷ್ಟು ಖಾಲಿ?
ಸೈಂಟಿಫಿಕ್ ಅಸಿಸ್ಟಂಟ್- 04
ಸೈಂಟಿಫಿಕ್ ಅಸಿಸ್ಟಂಟ್- 08
ಟೆಕ್ನಿಶಿಯನ್ ಜಿಆರ್-1- 06
ಜೂನಿಯರ್ ಹಿಂದಿ ಟ್ರಾನ್ಸ್ ಲೇಟರ್- 01
ಟೆಕ್ನಿಶಿಯನ್ ಜಿಆರ್-2- 23
ಅಸಿಸ್ಟಂಟ್ ಲೈಬ್ರೇರಿಯನ್- 02
ಸೈಂಟಿಫಿಕ್ ಅಸಿಸ್ಟಂಟ್, ಇಂಜಿನಿಯರಿಂಗ್ ಅಸಿಸ್ಟಂಟ್ ಹುದ್ದೆಗೆ ಗರಿಷ್ಠ 35 ವರ್ಷ ಮೀರದವರು, ಟೆಕ್ನಶಿಯನ್ ಗ್ರೇಡ್ 1 ಹುದ್ದೆಗೆ ಗರಿಷ್ಟ 28 ವರ್ಷ ಮೀರದವರು, ಜೂನಿಯರ್ ಹಿಂದಿ ಟ್ರಾನ್ಸ್ಲೇಟರ್, ಅಸಿಸ್ಟಂಟ್ ಗ್ರೇಡ್ 2, ಅಸಿಸ್ಟಂಟ್ ಲೈಬ್ರರಿಯನ್ ಹುದ್ದೆಗೆ ಗರಿಷ್ಠ 30 ವರ್ಷ ಮೀರದವರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಲೆವೆಲ್ 6, ಲೆವೆಲ್ 2, ಲೆವೆಲ್ 4 ವೇತನ ಶ್ರೇಣಿ, ಏಳನೇ ವೇತನ ಆಯೋಗದ ಅನ್ವಯ ವೇತನ ನೀಡಲಾಗುತ್ತದೆ.
ಅಧಿಸೂಚನೆಯನ್ನು ಸೆಂಟ್ರಲ್ ಪವರ್ ರಿಸರ್ಚ್ ಇನ್ ಸ್ಟಿಟ್ಯೂಟ್ ನ ವೆಬ್ ವಿಳಾಸ https://cpri.res.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಧಾರ್ ಕಾರ್ಡ್, ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಬರ್ತ್ ಸರ್ಟಿಫಿಕೇಟ್ ಸೇರಿ ಹಲವು ದಾಖಲೆಗಳನ್ನು ಸಲ್ಲಿಸಬೇಕಿದೆ.