ಶಿವಮೊಗ್ಗ: ಸಿಬಿಐ ಅಧಿಕಾರಿ ಸೋಗಿನಲ್ಲಿ ವೃದ್ಧರೊಬ್ಬರಿಗೆ 41 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ.
ನಗರದ ಸೆನ್ ಠಾಣೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಯುಪಿ ಮೂಲದ ಮೊಹಮ್ಮದ್ ಅಹ್ಮದ್ ಮತ್ತು ಅಭಿಷೇಕ್ ಕುಮಾರ್ ಬಂಧಿತರು. ಬಂಧಿತ ಆರೋಪಿಗಳಿಂದ 23 ಲಕ್ಷದ 89 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ.
ಗೋಪಾಳ ಬಡಾವಣೆಯ ವೃದ್ಧ ಆನಂದ್ ಎಂಬುವವರು ವಂಚನೆಗೊಳಗಾದವರು. ಸಿಬಿಐ ಅಧಿಕಾರಿ ಸೋಗಿನಲ್ಲಿ ವೃದ್ಧ ಆನಂದ್ ಗೆ ಕರೆ ಮಾಡಿದ್ದ ಖದೀಮರು ನಿಮ್ಮ ಆಧಾರ್ ಕಾರ್ಡ್ ನಂಬರ್ ಗೆ ದೊಡ್ಡ ಮಟ್ಟದ ಹಣ ವರ್ಗಾವಣೆ ಆಗಿದೆ. ನಿಮ್ಮ ಬ್ಯಾಂಕ್ ಖಾತೆ ಫ್ರೀಜ್ ಮಾಡಿದ್ದೇವೆ. ಹೀಗಾಗಿ ನಿಮ್ಮನ್ನು ಅರೆಸ್ಟ್ ಮಾಡಲು ಬರುತ್ತಿದ್ದೇವೆ ಎಂದು ಹೆದರಿಸಿದ್ದಾರೆ.
ನಿಮ್ಮನ್ನು ಬಂಧಿಸಬಾರದು ಅಂದರೆ ಹಣ ಕೊಡಿ ಎಂದು ಹೆದರಿಸಿದ್ದರು. ಆನಂದ್ ಖಾತೆಯಿಂದ 41 ಲಕ್ಷ ರೂ. ಹಣವನ್ನು ಖದೀಮರು ಹಾಕಿಸಿಕೊಂಡಿದ್ದಾರೆ. ಕೆಲ ದಿನಗಳ ನಂತರ ಮೋಸ ಹೋಗಿರುವ ಕುರಿತು ಆನಂದ್ ಗೆ ಅನುಮಾನ ಮೂಡಿದ್ದು, ಈ ಬಗ್ಗೆ ಶಿವಮೊಗ್ಗದ ಸೆನ್ ಠಾಣೆಗೆ ದೂರು ನೀಡಿದ್ದಾರೆ.