
ಹೆಸರು ಕೃತಿಕ್! ಈಗಿನ್ನು ಹತ್ತು ವರ್ಷದ ಈತನದ್ದು ಜೀವನ್ಮರಣ ಹೋರಾಟ! ಹೌದು, ನಾಲ್ಕನೇ ತರಗತಿ ಓದುತ್ತಿರುವ ಈ ಹುಡುಗನಿಗೆ “ಕ್ಯಾನ್ಸರ್” ಎಂಬ ಮಹಾಮಾರಿ ಮೂಳೆ ಹೊಕ್ಕಿ ಕೂತಿದೆ. ಅರ್ಥಾತ್ ಹತ್ತು ವರ್ಷದ ಆ ಹುಡುಗನಿಗೆ ಬಂದಿದ್ದು ಡೇಂಜರಸ್ “ಬೋನ್ ಕ್ಯಾನ್ಸರ್”! ಆತನ ಪಾಡು ಕಂಡವರಿಗೆ ಕರಳು ಕಿವುಚಿ ಬರುತ್ತಿದೆ. ಪಾಪ, ಬಡವರ ಮನೆಯಲ್ಲಿ ನಾನು ಹುಟ್ಟಿದ್ದೇ ತಪ್ಪಾ? ಎಂಬಂತೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿ, ಬದುಕಲು ಹೋರಾಡುತ್ತಿದ್ದಾನೆ ಕೃತಿಕ್!.
ಕುಂದಾಪುರ ತಾಲೂಕಿನ ಉಳ್ಳೂರು ಮೂಲದವರಾದ, ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಆಶಾ ಮತ್ತು ರಾಘವೇಂದ್ರ ದಂಪತಿಗಳ ಮಗನಾದ ಕೃತಿಕ್ ಭಯಾನಕ ವಿಧಿಯ ಹೊಡೆತಕ್ಕೆ ಸಿಲುಕಿ, ಬೆಂಗಳೂರಿನ “ಎಚ್ ಸಿ ಜಿ” (HCG) ಆಸ್ಪತ್ರೆಯಲ್ಲಿ ನಲುಗುತ್ತಿದ್ದಾನೆ. ಆಟ-ಪಾಠಗಳಲ್ಲಿ ತೊಡಗಿರಬೇಕಿದ್ದ ಆ ಎಳೆಯ ಜೀವ, ಜೀವನ್ಮರಣ ಹೋರಾಟ ನಡೆಸುತ್ತಿದೆ. ಈ ಮಾರಕ ‘ಕ್ಯಾನ್ಸರ್’ನ ಗಂಭೀರತೆ ಹೆಚ್ಚಿದ್ದು, ಸದ್ಯ ಆತನಿಗೆ ತುರ್ತು ಚಿಕಿತ್ಸೆಯ ಅನಿವಾರ್ಯತೆಯಿದೆ. ಆ ನಿಟ್ಟಲ್ಲಿ ಆಸ್ಪತ್ರೆಯಲ್ಲಿ ತಗಲುವ ವೆಚ್ಚ ಬರೋಬ್ಬರಿ ಇಪ್ಪತೈದು ಲಕ್ಷ (25 lakh) ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ ಸಣ್ಣದೊಂದು ಕಾಂಡಿಮೆಂಟ್ಸ್ ನಡೆಸುತ್ತಾ, ಅಲ್ಲಿಂದಲ್ಲಿಗೆ ಸಂಸಾರ ದೂಡುತ್ತಾ ಸಾಗುತ್ತಿದ್ದ ಬಡ ಕುಟುಂಬಕ್ಕೆ ಈ ಲಕ್ಷಗಟ್ಟಲೆಯ ಮಾತು ಎಲ್ಲಿಂದ ತಾನೆ ಬರಬೇಕು. ನಿಜಕ್ಕೂ, ಮಾರಕ ಕ್ಯಾನ್ಸರ್ ಕೊಟ್ಟ ಹೊಡೆತಕ್ಕೆ ಆ ಬಡ ಕುಟುಂಬ ನಲುಗಿ ಕೂತಿದೆ.
ಇಪ್ಪತೈದು ಲಕ್ಷ ಹಣ ಹೊಂದಿಸುವ ಶಕ್ತಿ ಆ ತಂದೆ-ತಾಯಿಗಿಲ್ಲ!. ಬದಲಿಗೆ ಕೃತಿಕ್ ನನ್ನು ಉಳಿಸಿಕೊಳ್ಳುವ ಶಕ್ತಿ ಸಹೃದಯಿಗಳಾದ ತಮ್ಮಲ್ಲಿದೆ. ಬಂಧುಗಳೇ, ಆ ಮಗುವಿನ ಸಹಾಯಕ್ಕೆ ತಮ್ಮಿಂದಾದ ತೆರದಲ್ಲಿ ನಿಂತುಬಿಡಿ.. ಕೃತಿಕ್ ನಿಮ್ಮಿಂದ ಮರಳಿ ಬದುಕುತ್ತಾನೆ;ಬದುಕಿಸಿಬಿಡಿ!
ಸಹಾಯ ಮಾಡುಲು ವಿವರ: Phonepay/ Googlepay No- 9591603864
ASHA K.R.
Bank: Bank of India
A/C : 845910110007768
IFSC: BKID0008459
Branch: Vidyaranyapura Bengaluru
