ವಿಜಯಪುರ ಜಿಲ್ಲೆಯ ಜಂಬಗಿಯ ಪ್ರಭುದೇವರ ಬೆಟ್ಟದ ಶಿವಯೋಗೀಶ್ವರ ಮಹಾರಾಜರ ಸಂಕಲ್ಪದಂತೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅಡವಿಲಿಂಗ ಮಹಾರಾಜರು 4.5 ಲಕ್ಷ ಮೌಲ್ಯದ ಸೀರೆಯನ್ನು ಸವದತ್ತಿಯ ರೇಣುಕಾ ಯಲ್ಲಮ್ಮ ದೇವಿಗೆ ಅರ್ಪಿಸಿದ್ದಾರೆ.
1955ರಲ್ಲಿ ಜಂಬಗಿಯ ಪ್ರಭುದೇವರ ಬೆಟ್ಟದ ಶಿವಯೋಗೀಶ್ವರ ಮಹಾರಾಜರು ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಆಗಮಿಸಿದ್ದರು. ಆಗ ದೇವಿಗೆ ಇಂತಹ ಸೀರೆ ನೀಡುವುದಾಗಿ ಬೇಡಿಕೊಂಡಿದ್ದರು. 70 ವರ್ಷಗಳ ನಂತರ ಕಾಶಿಯ ಬನಾರಸ್ ನಲ್ಲಿ ರೇಷ್ಮೆಯಿಂದ ತಯಾರಿಸಿದ ಮತ್ತು ಚಿನ್ನದ ಝರಿಗಳನ್ನು ಒಳಗೊಂಡ ಸೀರೆಯನ್ನು ದೇವಿಗೆ ಅರ್ಪಿಸಿ, ಉಡಿ ತುಂಬಿ ಹರಕೆ ತೀರಿಸಿದ್ದಾರೆ. ವೀರಘಟ್ಟದ ಅಡವಿಲಿಂಗ ಮಹಾರಾಜರು, ವಿವೇಕ ಚಿಂತಾಮಣಿ ಶ್ರೀಗಳು ಉಪಸ್ಥಿತರಿದ್ದರು.