‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ವಿನ್ನರ್ ಆದವರು ಹನುಮಂತ ಲಮಾಣಿ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದರೂ ವಿನ್ನರ್ ಆಗಬಹುದು ಎಂದು ತೋರಿಸಿಕೊಟ್ಟವರು ಪ್ರತಿಭಾವಂತ ಗಾಯಕ ಹನುಮಂತ. ಬಿಗ್ ಬಾಸ್ ಕನ್ನಡ ಸೀಸನ್ 12 ವಿಜೇತರ ಬಗ್ಗೆ ತನ್ನ ಅಭಿಪ್ರಾಯ ತಿಳಿಸಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ರೇಸ್ನಲ್ಲಿ ಮುಂಚೂಣಿಯಲ್ಲಿರುವ ಸ್ಪರ್ಧಿಗೆ 37 ಕೋಟಿ ವೋಟ್ ಬಿದ್ದಿದೆ ಎಂದು ಸುದೀಪ್ ಘೋಷಣೆ ಮಾಡಿದ್ದರು. ಈ ಮತ ಗಿಲ್ಲಿ ನಟನಿಗೆ ಬಿದ್ದಿದೆ ಎಂಬುದು ಅನೇಕರ ಊಹೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್ ಹನುಮಂತ ಕೂಡ ಇದೇ ರೀತಿಯ ಊಹೆ ಮಾಡಿದ್ದಾರೆ. ‘ಗಿಲ್ಲಿನೇ ಗೆಲ್ಲೋದು. ಅವನಿಗೆ 37 ಕೋಟಿ ವೋಟ್ ಬಂದಿರುತ್ತದೆ’ ಎಂದು ಅಭಿಪ್ರಾಯ ಹೊರಹಾಕಿದ್ದಾರೆ.
ಈ ಹಿಂದೆಯೂ ಕಾರ್ಯಕ್ರಮವೊಂದರಲ್ಲಿ ಹನುಮಂತ ಲಮಾಣಿ ಮಾತನಾಡುತ್ತಾ, ಎಲ್ಲರೂ ಬಿಗ್ ಬಾಸ್ ನೋಡ್ತಿದ್ದೀರೋ, ಇಲ್ವೋ? ನಿಮ್ಮ ವೋಟು ಯಾರಿಗೆ?’ ಎಂದು ವೇದಿಕೆ ಮೇಲೆಯೇ ಕೇಳಿದ್ದರು. ಆಗ ಆಡಿಯೆನ್ಸ್ ಕಡೆಯಿಂದ ‘’ಗಿಲ್ಲಿ… ಗಿಲ್ಲಿ..’’ ಎಂದು ಜೋರಾಗಿ ಕೇಳಿಸಿದ್ಮೇಲೆ ಹನುಮಂತ ಲಮಾಣಿ ಥಂಬ್ಸ್ ಅಪ್ ಮಾಡಿದ್ದರು.
ಹನುಮಂತ ಲಮಾಣಿ ಅವರಿಗೆ ತಮ್ಮದೇ ಆದ ಫ್ಯಾನ್ ಫಾಲೋವಿಂಗ್ ಇದೆ. ಗಿಲ್ಲಿಯ ಪರವಾಗಿ ಹನುಮಂತ ಲಮಾಣಿ ಸಹ ಬ್ಯಾಟ್ ಬೀಸಿರೋದು ಹಲವರಿಗೆ ಸಂತಸ ತಂದಿದೆ.
ಇದನ್ನೂ ಓದಿ : ಈ ಬಾರಿ ಬಿಗ್‌ಬಾಸ್‌ನಲ್ಲಿ ಗಿಲ್ಲಿನೇ ಗೆದ್ದು ಬರಲಿ | ಶಾಸಕ ನಂಜೇಗೌಡ



















