ಹನೋಯಿ: ವಿಯೆಟ್ನಾಂನಲ್ಲಿ ಪ್ರವಾಸಿಗರನ್ನು ಸಾಗಿಸುತ್ತಿದ್ದ ದೋಣಿ ಮುಗುಚಿದ ಪರಿಣಾಮ 34 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ. ಅಲ್ಲದೇ, ಘಟನೆಯಲ್ಲಿ 8ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ವಿಯೆಟ್ನಾಂನ ಬಹುತೇಕ ಕಡೆ ಶನಿವಾರ ಮಧ್ಯಾಹ್ನ ಭಾರೀ ಮಳೆಯಾಗಿತ್ತು. ಆ ವೇಳೆ ಹಾ ಲಾಂಗ್ ಕೊಲ್ಲಿ ಎಂಬಲ್ಲಿ ಭಊರೀ ಮಳೆ ಗಾಳಿಯಿಂದಾಗಿ ಪ್ರವಾಸಿ ತಾಣದಲ್ಲಿ ದೋಣಿ ಮುಗುಚಿ ಬಿದ್ದಿದೆ. ದೋಣಿಯಲ್ಲಿ 48 ಜನ ಪ್ರಯಾಣಿಕರಿದ್ದರು ಎನ್ನಲಾಗಿದೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ, 11 ಜನರನ್ನು ರಕ್ಷಿಸಲಾಗಿದೆ.