ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ನಲ್ಲಿ ಪ್ರಾಜೆಕ್ಟ್ ಎಂಜಿನಿಯರ್ ಹಾಗೂ ಪ್ರಾಜೆಕ್ಟ್ ಸೂಪರ್ ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಯಾ ಹುದ್ದೆಗಳಿಗೆ ಆಯ್ಕೆಯಾದ ಅನುಗುಣವಾಗಿ ಮಾಸಿಕ 88 ಸಾವಿರ ರೂಪಾಯಿವರೆಗೆ ಮಾಸಿಕ ವೇತನ ನೀಡಲಾಗುತ್ತದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಏಪ್ರಿಲ್ 16 ಹಾಗೂ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಏಪ್ರಿಲ್ 19ರವರೆಗೆ ಅವಕಾಶ ನೀಡಲಾಗಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು edn.bhel.com ಅಥವಾ careers.bhel.in ವೆಬ್ ಪೋರ್ಟಲ್ ಗೆ ಭೇಟಿ ನೀಡಬಹುದಾಗಿದೆ. ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 32 ವರ್ಷ ವಯಸ್ಸು ಮೀರಿರಬಾರದು. ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇದೆ.
ಪೋಸ್ಟ್, ವೇತನ ಎಷ್ಟು?
ಪ್ರಾಜೆಕ್ಟ್ ಎಂಜಿನಿಯರ್ ವಿಭಾಗದಲ್ಲಿ 17 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ ಮೊದಲ ವರ್ಷ 84 ಸಾವಿರ ರೂ. ಹಾಗೂ ದ್ವಿತೀಯ ವರ್ಷ 88 ಸಾವಿರ ರೂ. ವೇತನ ನೀಡಲಾಗುತ್ತದೆ. ಇನ್ನು ಪ್ರಾಜೆಕ್ಟ್ ಸೂಪರ್ ವೈಸರ್ ವಿಭಾಗದಲ್ಲಿ 16 ಹುದ್ದೆಗಳು ಖಾಲಿ ಇವೆ. ಇವರಿಗೆ ಮೊದಲ ವರ್ಷ 45 ಸಾವಿರ ರೂ. ಹಾಗೂ ದ್ವಿತೀಯ ವರ್ಷ 48 ಸಾವಿರ ರೂ. ಮಾಸಿಕ ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ ಎಷ್ಟು?
ಅರ್ಜಿ ಶುಲ್ಕವು ಜನರಲ್ ಕೆಟಗರಿ, ಒಬಿಸಿ ಕೆಟಗರಿ ಅಭ್ಯರ್ಥಿಗಳಿಗೆ 200 ರೂ. ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಎರಡು ವರ್ಷದ ಅವಧಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಪ್ರಾಜೆಕ್ಟ್ ಸೂಪರ್ವೈಸರ್ ಹುದ್ದೆಗಳಿಗೆ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಇನ್ ಸ್ಟ್ರುಮೆಂಟ್ ವಿಷಯಗಳಲ್ಲಿ ಡಿಗ್ರಿ ಅಥವಾ ಡಿಪ್ಲೋಮಾ ಪದವಿ ಪಡೆದಿರಬೇಕು. ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿಗೆ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಇನ್ ಸ್ಟ್ರುಮೆಂಟೇಷನ್ ವಿಷಯಗಳಲ್ಲಿ ಬಿಇ, ಬಿಟೆಕ್, ಬಿಸಿಎ ಶಿಕ್ಷಣ ಪಡೆದಿರಬೇಕು.