ಬೆಂಗಳೂರು: ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ 3ನ್ನು ನಡೆಸಲು ಮುಂದಾಗಿದ್ದು, ಪರೀಕ್ಷಾ ವೇಳಾ ಪಟ್ಟಿ ಪ್ರಕಟಿಸಿದೆ.
ಆಗಸ್ಟ್ 2 ರಿಂದ ಆಗಸ್ಟ್ 9 ರ ವರೆಗೆ ಪರೀಕ್ಷೆ ನಡೆಸಯಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮೌಲ್ಯ ನಿರ್ಣಯ ಮಂಡಳಿಯು ಪರೀಕ್ಷೆ-2 ನಡೆಸಿತ್ತು. ಈಗ ಮೂರನೇ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದೆ. 3ನೇ ಪರೀಕ್ಷೆಗೆ ಒಟ್ಟು 97,933 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ರಾಜ್ಯದ 410 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 459 ವಿದ್ಯಾರ್ಥಿಗಳು ಫಲಿತಾಂಶ ವೃದ್ಧಿಗಾಗಿ ಮರು ಪರೀಕ್ಷೆ ತೆಗೆದುಕೊಂಡಿದ್ದಾರೆ. ಪರೀಕ್ಷಾ ಅಕ್ರಮ ತಡೆಗಟ್ಟಲು ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಆ.2ರಂದು ಪ್ರಥಮ ಭಾಷೆ ವಿಷಯದ ಪರೀಕ್ಷೆಯು ಬೆಳಿಗ್ಗೆ 10.15 ರಿಂದ 1.30ರವರೆಗೆ, ಆ.3 ರಂದು ತೃತೀಯ ಭಾಷೆ ವಿಷಯದ ಪರೀಕ್ಷೆಯು ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.15ರವರೆಗೆ, ಆ.5 ರಂದು ವಿಜ್ಞಾನ ವಿಷಯದ ಪರೀಕ್ಷೆಯು 10.15ರಿಂದ 1.30ರವರೆಗೆ, ಆ.6 ರಂದು ಸಮಾಜ ವಿಜ್ಞಾನ ವಿಷಯ ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.30, ಆ.7ರಂದು ದ್ವಿತೀಯ ಭಾಷೆ, ಬೆಳಿಗ್ಗೆ 10.15 ರಿಂದ 1.15, ಆ.8ರಂದು ಗಣಿತ ವಿಷಯದ ಪರೀಕ್ಷೆ ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿವೆ.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರ್, ಸೈಬರ್ ಸೆಂಟರ್, ಕೋಚಿಂಗ್ ಸೆಂಟರ್‌ಗಳು ಪರೀಕ್ಷೆ ಮುಗಿಯುವವರೆಗೂ ತೆರೆಯದಂತೆ ಇಲಾಖೆ ಆದೇಶಿಸಿದೆ.