ಬೆಂಗಳೂರು: ಕರ್ನಾಟಕದ ಮಂಗಳೂರು ತಾಲೂಕು ಸುರತ್ಕಲ್ ನಲ್ಲಿರುವ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ರಿಸರ್ಚ್ ಅಸೋಸಿಯೇಟ್ ಹಾಗೂ ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಸುರತ್ಕಲ್ ಕಚೇರಿಯಲ್ಲಿ ಕೆಲಸ ಮಾಡಲು ಇಚ್ಛಿಸುವವರು ಏಪ್ರಿಲ್ 10ರೊಳಗೆ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ಹೆಸರು : ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ
ಹುದ್ದೆಗಳ ಸಂಖ್ಯೆ: 03
ಉದ್ಯೋಗ ಸ್ಥಳ: ಸುರತ್ಕಲ್ – ಕರ್ನಾಟಕ
ಹುದ್ದೆ ಹೆಸರು: ರಿಸರ್ಚ್ ಅಸೋಸಿಯೇಟ್ ಹಾಗೂ ಪ್ರಾಜೆಕ್ಟ್ ಅಸೋಸಿಯೇಟ್
ಸಂಬಳ: ಮಾಸಿಕ 34,800-79,060 ರೂ.
ವಿದ್ಯಾರ್ಹತೆ ಏನು?
ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಪಿಎಚ್.ಡಿ ಪಡೆದಿರುವುದು ಕಡ್ಡಾಯವಾಗಿದೆ. ಹಾಗೆಯೇ, ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು ಕಡ್ಡಾಯವಾಗಿ ಬಿಇ, ಬಿ.ಟೆಕ್, ಎಂಇ ಅಥವಾ ಎಂ.ಟೆಕ್ ಕೋರ್ಸ್ ಗಳನ್ನು ಮುಗಿಸಿರಬೇಕು. ಮೊದಲು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ನಂತರ ನೇರ ಸಂದರ್ಶನ ನಡೆಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ, [email protected] ಇ-ಮೇಲ್ ಐಡಿಗೆ ಏಪ್ರಿಲ್ 10 ಅಥವಾ ಅದಕ್ಕೂ ಮೊದಲು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬಹುದು. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ https://www.nitk.ac.in/ ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.