ಮಂಡ್ಯ : ಇಲ್ಲಿನ ಭೂತನಹೊಸೂರು ಗ್ರಾಮದಲ್ಲಿರುವ ಕಬ್ಬಿನ ಗದ್ದೆಯೊಂದರಲ್ಲಿ ಮೂರು ಚಿರತೆ ಮರಿಗಳು ಪತ್ತೆಯಾಗಿವೆ. ತಾಯಿ ಚಿರತೆ ನಾಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.
ಕಳೆದ ಒಂದು ವಾರದಿಂದ ಗ್ರಾಮದಲ್ಲಿ 2 ಕುರಿ ಚಿರತೆಗೆ ಬಲಿಯಾಗಿವೆ. ಚಿರತೆ ಪ್ರತ್ಯಕ್ಷದಿಂದ ಸುತ್ತಮುತ್ತಲ ಗ್ರಾಮಸ್ಥರು ಗದ್ದೆಗೆ ತೆರಳಲು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ, ಚಿರತೆ ಮರಿಗಳನ್ನ ರಕ್ಷಿಸಿದ್ದಾರೆ. ತಾಯಿ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಮಿನಿ ಜಲಪಾತದಂತಾದ ಬೆಂಗಳೂರು ಏರ್‌ಪೋರ್ಟ್.. ವಿಡಿಯೋ ವೈರಲ್



















