ಮೈಸೂರು : ಬೆಂಗಳೂರಿನ ಮಲ್ಲೇಶ್ವರಂ 15ನೇ ಕ್ರಾಸ್ನ ಕೆನರಾ ಬ್ಯಾಂಕ್ನ ಹಿರಿಯ ವ್ಯವಸ್ಥಾಪಕ ಮ್ಯಾನೇಂಜರ್ ಎನ್.ರಘು ವಿರುದ್ಧ ವಿರುದ್ಧ 41 ಗ್ರಾಹಕರಿಗೆ ಮಕ್ಮಲ್ ಟೋಪಿ ಹಾಕಿ ಒಟ್ಟು 3.11 ಕೋಟಿಗೂ ಹೆಚ್ಚು ಹಣ ವಂಚಿಸಿರುವ ಆರೋಪ ಕೇಳಿಬಂದಿದ್ದು, ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅಗಸ್ಟ್ 4 ರಿಂದ ಡಿ.9ರವರೆಗೆ ನಕಲಿ ಗೋಲ್ಡ್ ಲೋನ್ ಸೃಷ್ಟಿಸಿದ್ದ ರಘು, 41 ಗ್ರಾಹಕರ ಖಾತೆಗಳಲ್ಲಿ ನಕಲಿ ಗೋಲ್ಡ್ ಲೋನ್ ಮಾಡಿ ಹಣ ಪಡೆದು ಲೂಟಿ ಮಾಡಿದ್ದಾರೆ.
ಬ್ಯಾಂಕ್ನ ಗ್ರಾಹಕರಾಗಿರುವ ವೃದ್ಧರು, ಪಿಂಚಣಿದಾರರು, ಆರ್ಚಕರು, ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ನಕಲಿ ಗೋಲ್ಡ್ ಲೋನ್ ಸೃಷ್ಟಿಸಿದ್ದು, ಇವರ ಖಾತೆಗಳ ಒಟಿಪಿ ಹಾಗೂ ಚೆಕ್ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಮ್ಯಾನೇಜರ್ ರಘು ಎಸ್ಕೇಪ್ ಆಗಿದ್ದು, ಇತ್ತ 41 ಖಾತೆಗಳನ್ನ ಬ್ಯಾಂಕ್ ಫ್ರೀಜ್ ಮಾಡಿದ್ದರಿಂದ ಗ್ರಾಹಕರು ಪರದಾಡುವಂತಾಗಿದೆ.
ಇದನ್ನೂ ಓದಿ : ಹೊಸ ವರ್ಷಾಚರಣೆ | ರಾಜ್ಯಧಾನಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚನೆ



















