ಕೊಡಗು: ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಈ ಗಾಂಜಾ ಥೈಲ್ಯಾಂಡ್ ನಿಂದ ಕೊಡಗಿಗೆ ಬಂದಿತ್ತು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹಾಗೂ ಕೊಡಗು ಮೂಲದ ಮೆಹರೂಫ್, ರವೂಫ್, ನಾಸಿರುದ್ದೀನ್,, ವಾಜೀದ್, ಯಾಹಿಯಾ, ಅಕಾನಾಸ್ ಹಾಗೂ ರಿಯಾಜ್ ಸೇರಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ತರಲಾಗಿದ್ದ ಹೈಡ್ರೋ ಗಾಂಜಾ ಇದಾಗಿದ್ದು, ಮಡಿಕೇರಿ ನಗರದ ವಿರಾಜಪೇಟೆ ರಸ್ತೆಯ ಹತ್ತಿರ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ ಸ್ಟಾಗ್ರಾಂ ಮೂಲಕ ಆರ್ಡರ್ ಮಾಡಿ ಥೈಲ್ಯಾಂಡ್ ನಿಂದ ಹೈಡ್ರೋ ಗಾಂಜಾ ತರಿಸಿಕೊಳ್ಳುತ್ತಿದ್ದ ತೌನೇಶ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ 1.22 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ ವಶಕ್ಕೆ ಪಡೆದಿದ್ದಾರೆ.