ಬೆಂಗಳೂರು: ಚಂದನವನ ಪ್ರವೇಶಿಸಿ ನಟ ಕಿಚ್ಚ ಸುದೀಪ್ (Sudeep) ಇಂದಿಗೆ 29 ವರ್ಷಗಳನ್ನು ಕಳೆದಿದ್ದಾರೆ. ಜ.31ಕ್ಕೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅವರು ಬರೋಬ್ಬರಿ 29 ವರ್ಷಗಳ ಹಾದಿ ಸವೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ಈ ಕುರಿತು ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಸುದೀಪ್ ತಮ್ಮ ಪೋಸ್ಟ್ ನಲ್ಲಿ 29 ವರ್ಷಗಳು. ನನ್ನ ಈ ಸುದೀರ್ಘ ಪ್ರಯಾಣಕ್ಕಾಗಿ ನನ್ನಲ್ಲಿ ಕೃತಜ್ಞತಾ ಭಾವನೆ ಇದೆ. ಅಭಿಮಾನಿಗಳನ್ನು ರಂಜಿಸುವುದು. ಪ್ರತಿನಿಧಿಸುವ ಕತೆಗಳಿಗೆ ನಾನು ಪಾತ್ರವಾಗುವುದು ನನ್ನ ಪಾಲಿಗೆ ಅತ್ಯಂತ ಗೌರವದ ಕೆಲಸ. ನಿಮ್ಮಿಂದ ಸಿಕ್ಕಿರುವ ಸತತ ಪ್ರೀತಿ, ಬೆಂಬಲ ನನ್ನಲ್ಲಿ ಸ್ಫೂರ್ತಿ ತುಂಬುತ್ತಲೇ ಬರುತ್ತಿದೆ. ಅಂತಹ ಡೆಡಿಕೇಟೆಡ್ ಅಭಿಮಾನಿಗಳನ್ನು ಹೊಂದಿರುವುದು ನನ್ನ ಸೌಭಾಗ್ಯ ಎಂದು ಹಾಡಿ ಹೊಗಳಿದ್ದಾರೆ.
ನಿಮ್ಮ ಬೆಂಬಲದಿಂದಲೇ ಸವಾಲುಗಳನ್ನು ಎದುರಿಸುವ ಹುಮ್ಮಸ್ಸು ಸಿಕ್ಕಿದೆ. ಈ ಅದ್ಭುತವಾದ ಪ್ರಯಾಣದ ಭಾಗವಾಗಿದ್ದಕ್ಕಾಗಿ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದಷ್ಟೇ ನಾನು ಹೇಳಬಹುದು ಎಂದು ಬರೆದುಕೊಂಡಿದ್ದಾರೆ.