ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (Cement Corporation of India Limited)ನಲ್ಲಿ ಖಾಲಿ ಇರುವ 29 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಎಂಜಿನಿಯರ್, ಅಧಿಕಾರಿ ಹಾಗೂ ವಿಶ್ಲೇಷಕ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಫ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಜುಲೈ 12 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ ಹೆಸರು : Cement Corporation of India Limited
ಒಟ್ಟು ಹುದ್ದೆಗಳು : 29
ಹುದ್ದೆಗಳ ಹೆಸರು : ಎಂಜಿನಿಯರ್, ಅಧಿಕಾರಿ, ವಿಶ್ಲೇಷಕ
ಉದ್ಯೋಗ ಸ್ಥಳ : ನವದೆಹಲಿ
ಅರ್ಜಿಯ ಮೋಡ್ : ಆಫ್ಲೈನ್
ವಿದ್ಯಾರ್ಹತೆ ಏನು?
ಎಂಜಿನಿಯರ್ : ಡಿಪ್ಲೊಮಾ, BE/B.Tech, MSc
ಅಧಿಕಾರಿ : ಡಿಪ್ಲೊಮಾ, BE/B.Tech, BBA, MBA, ಸ್ನಾತಕೋತ್ತರ ಪದವಿ
ವಿಶ್ಲೇಷಕ : CA (Inter), ICWA (Inter), MBA
ನೇಮಕಾತಿ ಹೊಂದಿದ ಅಭ್ಯರ್ಥಿಗಳಿಗೆ ಮಾಸಿಕ 40 ಸಾವಿರ ರೂ. ವೇತನ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ ವಯಸ್ಸು 40 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು. ಅರ್ಜಿ ಪರಿಶೀಲನೆ ನಂತರ, ಸಂದರ್ಶನ ಅಥವಾ ಲಿಖಿತ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಅಧಿಕೃತ ಅಧಿಸೂಚನೆಯಲ್ಲಿ ಸಂಪೂರ್ಣ ಮಾಹಿತಿ ಲಭ್ಯವಿದೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ :
AGM (HR),
Cement Corporation of India Limited,
Post Box No: 3061,
Lodhi Road Post Office,
New Delhi – 110003