ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಖಿ ಒನ್ ಸ್ಟಾಪ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸಲು ಹೊರ ಗುತ್ತಿಗೆ ಆಧಾರ ಮೇಲೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿರುವ ಸಖಿ ಒನ್ ಸ್ಟಾಪ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವವರು ಮೇ 2ರೊಳಗೆ ಅರ್ಜಿ ಸಲ್ಲಿಸುವ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ.
ಆಫ್ ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಘಟಕ ಆಡಳಿತಾಧಿಕಾರಿಗಳು 2 ಹುದ್ದೆ, ಆಪ್ತ ಸಮಾಲೋಚಕರು 1, ಸಮಾಜ ಸೇವಾ ಕಾರ್ಯಕರ್ತರು/ ಕೇಸ್ ವರ್ಕರ್ 7 ಹುದ್ದೆ, ಕಾನೂನು ಸಲಹೆಗಾರರು, ವಕೀಲರು (ಪ್ಯಾರಾ ಲೀಗಲ್ ) 9 ಹುದ್ದೆ ಮತ್ತು ವಿವಿದೋದ್ದೇಶ ಸ್ವಚ್ಛತಾಗಾರರು/ ಸೆಕ್ಯೂರಿಟಿ 7 ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ
ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಡಾ.ಎಂ. ಎಚ್. ಮರಿಗೌಡ ರಸ್ತೆ, ಬೆಂಗಳೂರು -560029 ಇಲ್ಲಿಗೆ ತಮ್ಮ ವಿವರವನ್ನು ಎಲ್ಲಾ ದಾಖಲೆಗಳೊಂದಿಗೆ ಮೇ 2ರ ಸಂಜೆಯೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ 080- 29578688 ಕ್ಕೆ ಸಂಪರ್ಕಿಸಬಹುದು.
ವಿದ್ಯಾರ್ಹತೆ ಏನು?
ಕಾನೂನು ಸಲಹೆಗಾರರು, ವಕೀಲರು (ಪ್ಯಾರಾ ಲೀಗಲ್ ) ಹುದ್ದೆಗೆ ಕಾನೂನು ಪದವಿ ಹೊಂದಿರಬೇಕು. ವಿವಿದೋದ್ದೇಶ ಸ್ವಚ್ಛತಾಗಾರರು/ ಸೆಕ್ಯೂರಿಟಿ (ರಾತ್ರಿ ಕಾವಲು) ಹುದ್ದೆಗೆ 7ನೇ ತರಗತಿ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ.
ಘಟಕ ಆಡಳಿತಾಧಿಕಾರಿಗಳು ಹುದ್ದೆಗೆ ಎಂ.ಎಸ್ ಡಬ್ಲ್ಯೂ, ಸ್ನಾತಕೋತ್ತರ ಕಾನೂನು ಪದವಿ., ಎಂ.ಎಸ್.ಸಿ ಹೋಮ್ ಸೈನ್ಸ್ (ಹ್ಯೂಮನ್ ಡೆವೆಲಪ್ ಮೆಂಟ್ & ಫ್ಯಾಮಿಲಿ ರಿಲೇಷನ್) ಎಂ.ಎಸ್.ಸಿ. ಸೈಕಾಲಜಿ., ಎಂ.ಎಸ್.ಸಿ ಸೈಕಿಯಾಟ್ರಿ ಡಿಗ್ರಿ ಪಡೆದಿರಬೇಕು.
ಸಮಾಜ ಸೇವಾ ಕಾರ್ಯಕರ್ತರು ಅಥವಾ ಕೇಸ್ ವರ್ಕರ್ ಹುದ್ದೆಗೆ ಬಿ.ಎಸ್.ಡಬ್ಲ್ಯೂ, ಬಿ.ಎ (ಸೋಷಿಯಾಲಜಿ, ಮಹಿಳಾ ಅಧ್ಯಯನ) ಪದವಿ ಹೊಂದಿರಬೇಕು.
ಆಪ್ತ ಸಮಾಲೋಚಕರ ಹುದ್ದೆಗೆ ಎಂ.ಎಸ್ ಡಬ್ಲ್ಯೂ, ಎಂ.ಎಸ್.ಸಿ ಹೋಮ್ ಸೈನ್ಸ್ (ಹ್ಯೂಮನ್ ಡೆವೆಲಪ್ ಮೆಂಟ್ & ಫ್ಯಾಮಿಲಿ ರಿಲೇಷನ್) ಎಂ.ಎಸ್.ಸಿ. ಸೈಕಾಲಜಿ., ಎಂ.ಎಸ್.ಸಿ ಸೈಕಿಯಾಟ್ರಿ ಪದವಿ ಹೊಂದಿರಬೇಕು.



















