ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಕಚೇರಿಯಲ್ಲಿ 25 ಹುದ್ದೆಗಳು ಖಾಲಿ (EPFO Jobs) ಇವೆ. ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇರುವವರು, ಆಸಕ್ತರು, ತತ್ಸಮಾನ ಪದವಿ ಪಡೆದವರು ಮಾರ್ಚ್ ಮಾರ್ಚ್ 29ರೊಳಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವುದು ಹೇಗೆ? ವೇತನ ಎಷ್ಟು ಎಂಬುದರ ಕುರಿತು ಮುಂದೆ ಓದಿ.
ಉಪ ನಿರ್ದೇಶಕ (ವಿಜಿಲೆನ್ಸ್) ಮತ್ತು ಸಹಾಯಕ ನಿರ್ದೇಶಕ (ವಿಜಿಲೆನ್ಸ್) ಹುದ್ದೆಗಳು ಖಾಲಿ ಇವೆ. ಲಿಖಿತ ಪರೀಕ್ಷೆ ಇಲ್ಲದೆ, ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ದೆಹಲಿಯಲ್ಲಿರುವ ಇಪಿಎಫ್ಒ ಕಚೇರಿಯಲ್ಲಿ ಕೆಲಸ ಮಾಡಲು ಇಚ್ಛಿಸುವವರು ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಉಪ ನಿರ್ದೇಶಕ ಸ್ಥಾನಕ್ಕೆ 7, ಸಹಾಯಕ ನಿರ್ದೇಶಕ ಸ್ಥಾನಕ್ಕೆ 18 ಹುದ್ದೆಗಳು ಖಾಲಿ ಇವೆ.
ಮಾಸಿಕ ವೇತನ ಎಷ್ಟು?
ಉಪ ನಿರ್ದೇಶಕ (ವಿಜಿಲೆನ್ಸ್) ಹುದ್ದೆಗೆ ಮಾಸಿಕ 15,600 ರೂಪಾಯಿಯಿಂದ 39,100 ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ. ಸಹಾಯಕ ನಿರ್ದೇಶಕ (ವಿಜಿಲೆನ್ಸ್) ಹುದ್ದೆಗೆ ಆಯ್ಕೆ ಆದವರಿಗೂ ಮಾಸಿಕ 15,600 ರೂಪಾಯಿಯಿಂದ 39,100 ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರ ಗರಿಷ್ಠ ವಯಸ್ಸು 56 ವರ್ಷದ ಒಳಗೆ ಇರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಇಪಿಎಫ್ಒ ವೆಬ್ ಪೋರ್ಟಲ್ ಆಗಿರುವ https://www.epfindia.gov.in/ ಗೆ ಭೇಟಿ ನೀಡಬೇಕು. ಅಲ್ಲಿ ದೊರೆಯುವ ಅರ್ಜಿ ಭರ್ತಿ ಮಾಡಿ, ಸೂಕ್ತ ದಾಖಲೆ ಲಗತ್ತಿಸಬೇಕು. ನಂತರ ಅದರ ಪ್ರತಿ ಪಡೆದು ”ಶ್ರೀ ದೀಪಕ್ ಆರ್ಯ, ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು-II (ನೇಮಕಾತಿ/ಪರೀಕ್ಷಾ ವಿಭಾಗ), ಪ್ಲೇಟ್ A, ನೆಲ ಮಹಡಿ, ಬ್ಲಾಕ್ II, ಪೂರ್ವ ಕಿದ್ವಾಯಿ ನಗರ, ನವದೆಹಲಿ – 110023” ವಿಳಾಸಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ ಗೆ ಭೇಟಿ ನೀಡಿ.