ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ (UPSC EPFO Recruitment 2025) ಖಾಲಿ ಇರುವ 230 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಎನ್ ಫೋರ್ಸ್ ಮೆಂಟ್ ಆಫೀಸರ್, ಅಕೌಂಟ್ಸ್ ಆಫೀಸರ್ ಅಥವಾ ಅಸಿಸ್ಟಂಟ್ ಪ್ರಾವಿಡೆಂಟ್ ಫಂಡ್ ಕಮಿಷನರ್ ಹುದ್ದೆಗಳ ನೇಮಕಾತಿಗಾಗಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಗಸ್ಟ್ 18 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಹುದ್ದೆಗಳ ವಿವರ
ನೇಮಕಾತಿ ಪ್ರಾಧಿಕಾರ: ಕೇಂದ್ರ ಲೋಕಸೇವಾ ಆಯೋಗ
ಹುದ್ದೆಗಳ ಹೆಸರು: ಎನ್ ಫೋರ್ಸ್ ಮೆಂಟ್ ಆಫೀಸರ್ ಅಥವಾ ಅಕೌಂಟ್ಸ್ ಆಫೀಸರ್, ಅಸಿಸ್ಟಂಟ್ ಪ್ರಾವಿಡೆಂಟ್ ಫಂಡ್ ಕಮಿಷನರ್
ಹುದ್ದೆಗಳ ಸಂಖ್ಯೆ: 230
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 18
ಎನ್ ಫೋರ್ಸ್ ಮೆಂಟ್ ಆಫೀಸರ್ ಅಥವಾ ಅಕೌಂಟ್ಸ್ ಆಫೀಸರ್ ವಿಭಾಗದಲ್ಲಿ 156 ಹುದ್ದೆಗಳು ಖಾಲಿ ಇವೆ. ಅಸಿಸ್ಟಂಟ್ ಪ್ರಾವಿಡೆಂಟ್ ಫಂಡ್ ಕಮಿಷನರ್ ವಿಭಾಗದಲ್ಲಿ 74 ಹುದ್ದೆಗಳು ಖಾಲಿ ಇವೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಯಾವುದೇ ವಿಭಾಗದಲ್ಲಿ ಪದವಿ ಪದವಿ ಪಡೆದಿರಬೇಕು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವವರು https://upsc.gov.in/ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ವರ್ಗ ಮತ್ತು ಇಡಬ್ಲ್ಯೂಎಸ್ ಗೆ 30 ವರ್ಷಗಳು, ಒಬಿಸಿಗೆ 33 ವರ್ಷಗಳು, ಎಸ್ ಸಿ- ಎಸ್ ಟಿಗೆ 35 ವರ್ಷಗಳು ಮತ್ತು ಪಿಡಬ್ಲ್ಯೂಬಿಡಿಗೆ 40 ವರ್ಷಗಳು ವಯೋಮಿತಿಯನ್ನು ಹೊಂದಿರಬೇಕು.ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ವನ್ನು ಒಳಗೊಂಡಿರುತ್ತದೆ. ಮೊದಲನೆಯದಾಗಿ, ಅಭ್ಯರ್ಥಿಗಳು ಪೆನ್ನು ಮತ್ತು ಕಾಗದದ ಆಧಾರದ ಮೇಲೆ ನಡೆಯುವ ಕಂಬೈನ್ಡ್ ನೇಮಕಾತಿ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ, ಇದರಲ್ಲಿ ಅವರು ಉತ್ತೀರ್ಣರಾದರೆ, ಅವರಿಗೆ ಸಂದರ್ಶನಕ್ಕೆ ಹಾಜರಾಗಲು ಅವಕಾಶ ಸಿಗುತ್ತದೆ.