ಸಿದ್ದರಾಮಯ್ಯ ಸರ್ಕಾರ 20 ಲಕ್ಷ ಕಾರ್ಡ್ ಗಳನ್ನು ರದ್ದು ಮಾಡಿ ಗೃಹ ಲಕ್ಷ್ಮೀಯ ಹಣ ಉಳಿತಾಯ ಮಾಡಲು ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನಿರಂತರವಾಗಿ ಬಡವರಿಗೆ ಅನ್ಯಾಯ ಮಾಡುವ ಕೆಲಸವನ್ನು ಮಾಡುತ್ತಿದೆ. ಬಡವರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಬಡವರ ಶಾಪ ಈ ಸರ್ಕಾರಕ್ಕೆ ತಟ್ಟಲಿದೆ. ಅವರಿಗೆ ಅಧಿಕಾರದ ಹಪಾಹಪಿ ಹಾಗೂ ಹಣದ ದಾಹ ಮಾತ್ರ ಇದೆ. ಜನರ ಅಭಿವೃದ್ಧಿಗೆ ಅವರಿಗೆ ಬೇಕಿಲ್ಲ ಎಂದು ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಕಾಂಗ್ರೆಸ್ ಕಚೇರಿ ಬೇಗ ಕಟ್ಟಿಸಿ. ರಾಜಕೀಯದಲ್ಲಿ ಯಾವಾಗ ಏನ್ ಬೇಕಾದ್ರು ಆಗಬಹುದು ಎಂದು ವ್ಯಂಗ್ಯವಾಡಿದ್ದಾರೆ.