ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸೂಚನೆಯ ಮೇರೆಗೆ ಬೆಂಗಳೂರು ರಸ್ತೆಗಳ ನಿರ್ಮಾಣ ಹಾಗೂ ನಿರ್ವಹಣೆಗಾಗಿ ಬಿಬಿಎಂಪಿಗೆ ಕಮಿಟಿ ರಚಿಸಿದೆ.
ಮಳೆಗಾಲದ ಸಂದರ್ಭದಲ್ಲಿ ಬೆಂಗಳೂರಿನಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಡೆಡ್ ಲೈನ್ ನೀಡಿದ್ದರು. ಸದ್ಯ ಡೆಡ್ ಲೈನ್ ಅವಧಿ ಮುಕ್ತಾಯವಾಗಿದೆ. ಆದರೆ, ಗುಂಡಿಗಳನ್ನೇ ಮುಚ್ಚಿಲ್ಲ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಈ ಮಧ್ಯೆ ಸರ್ಕಾರ ಹಾಗೂ ಪಾಲಿಕೆ ಹೊಸ ದಾಳ ಉರುಳಿಸಿವೆ. ಈ ಮೂಲಕ ರಾಜಧಾನಿಯ ರಸ್ತೆಗಳ ನಿರ್ವಹಣೆಗೆ ಹೊಸ ಡ್ರಾಮ ಶುರು ಮಾಡಿದೆ.
ಈಗ ರಾಜಧಾನಿಯ ರಸ್ತೆಗಳ ಮೇಲ್ವಿಚಾರಣೆಗೆ ಕಮಿಟಿ ರಚನೆ ಮಾಡಲಾಗಿದೆ. ಬಿಬಿಎಂಪಿಯ ಚೀಫ್ ಇಂಜಿನಿಯರ್ ನೇತೃತ್ವದಲ್ಲಿ ಕಮಿಟಿ ರಚಿಸಲಾಗಿದೆ. IISC ತಜ್ಞರನ್ನೊಳಗೊಂಡಿರುವ ಕಮಿಟಿ ರಚಿಸಲಾಗಿದೆ. ಕಮಿಟಿಗೆ ಬೆಂಗಳೂರಿನ ರಸ್ತೆಗಳ ಸ್ಥಿತಿಗತಿ ಪರಿಶೀಲನೆ, ಹೊಸ ರಸ್ತೆ ನಿರ್ಮಾಣದ ಹೊಣೆ ಹೊರಿಸಲಾಗಿದೆ. ರಸ್ತೆ, ಚರಂಡಿ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳ ಕುರಿತು ಈ ಕಮಿಟಿ ಪರಿಶೀಲನೆ ನಡೆಸಲಾಗುತ್ತದೆ. ಈ ಕಮಿಟಿ ಪ್ರತಿ ತಿಂಗಳ 1ನೇ ತಾರೀಖು ಹಾಗೂ 3ನೇ ಬುಧವಾರ ಕಮಿಟಿ ಸಭೆ ನಡೆಸಲಿದೆ. ಕಮಿಟಿಗೆ ಬಿಬಿಎಂಪಿ ಚೀಫ್ ಇಂಜಿನಿಯರ್ ಪ್ರಹ್ಲಾದ್ ಅಧ್ಯಕ್ಷರಾಗಿದ್ದಾರೆ.