ಹುಬ್ಬಳ್ಳಿ: ಮಧ್ಯರಾತ್ರಿ ಮನೆಗೆ ನುಗ್ಗಿ ಹಣ, ಚಿನ್ನಾಭರಣದೊಂದಿಗೆ ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ಆರೋಪಿಯನ್ನು ಸ್ಥಳೀಯರು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.
ಇಲ್ಲಿಯ ನೇಕಾರ ನಗರದಲ್ಲಿ ಈ ಘಟನೆ ನಡೆದಿದೆ. ಚೇತನ್ ಅಡಕಿ ಎಂಬ ಆರೋಪಿ ಮಹಿಳೆಯರ ಒಳ ಉಡುಪು ಕದ್ದು ಸಿಕ್ಕಿಬಿದ್ದಿದ್ದಾನೆ. ನೇಕಾರ ನಗರದಲ್ಲಿ ಇತ್ತೀಚೆಗೆ ಮಹಿಳೆಯರ ಒಳ ಉಡುಪು ಕಳ್ಳತನವಾಗುತ್ತಿದ್ದವು. ಅಲ್ಲದೇ, ಹಣ ಕೂಡ ಕಳ್ಳತನವಾಗುತ್ತಿದ್ದವು. ಇದರಿಂದಾಗಿ ಈ ಭಾಗದ ಜನರು ರೋಸಿ ಹೋಗಿದ್ದರು. ಹೀಗಾಗಿ ಸಿಸಿ ಕ್ಯಾಮರಾ ಅಳವಡಿಸಿದ್ದರು.
ಹೀಗೆ ಮಧ್ಯರಾತ್ರಿ ಮನೆಯೊಂದರ ಗೇಟ್ ಹಾರಿ ಬಂದು ಮಹಿಳೆಯರು ಹಾಕಿದ್ದ ಒಳ ಉಡುಪುಗಳನ್ನು ಕಳ್ಳತನ ಮಾಡಲು ಯತ್ನಿಸಿದ್ದ ವೇಳೆ ಸ್ಥಳೀಯರು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ವೇಳೆ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೂ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.