ಬೆಂಗಳೂರು: ಕೆಪಿಎಸ್ಸಿ ಪರೀಕ್ಷೆ (KPSC Exam) ಅವಾಂತರ ರಾಜ್ಯದಲ್ಲಿ ದೊಡ್ಡ ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಯಲ್ಲಿ ತೊಂದರೆಯಾಗಿರುವುದು ದೊಡ್ಡ ಆಕ್ರೋಶಕ್ಕೆ ಗುರಿಯಾಗಿತ್ತು. ಸದ್ಯ ಈ ಕುರಿತು ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಉತ್ತರ ನೀಡಿದ್ದಾರೆ.
ಕೆಪಿಎಸ್ಸಿಯಲ್ಲಿ ಹಲವು ಬಾರಿ ಅವಾಂತರ, ಹಗರಣ ಆಗಿದೆ. ನಾವು ಇದನ್ನ ಅಲ್ಲಗಳೆಯಲ್ಲ. ಅಶೋಕ್ (R.Ashok) ಆರೋಪಕ್ಕೆ ನಮ್ಮ ತಕರಾರಿಲ್ಲ. ಕೆಪಿಎಸ್ಸಿ ಸುಧಾರಣೆ ಆಗಬೇಕು. ಇದಕ್ಕೆ ವಿಪಕ್ಷಗಳು ಸಲಹೆ ಕೊಡಲಿ, ಸ್ವೀಕರಿಸುತ್ತೇವೆ. ಹೀಗಾಗಿಯೇ ಕೆಪಿಎಸ್ಸಿ ನಿಯಮಗಳಲ್ಲಿ ಬದಲಾವಣೆ ನಡೆಯುತ್ತಿದೆ. ಕಾಯ್ದೆ ತಿದ್ದುಪಡಿ ಮಾಡುತ್ತಿದ್ದೇವೆ. ಹೀಗಾಗಿ ಕೆಪಿಎಸ್ಸಿ ಭಾಷಾಂತರಕಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಆದರೆ, ಮರು ಪರೀಕ್ಷೆ ನಡೆಸುವ ಅಧಿಕಾರ ನನಗಿಲ್ಲ ಎಂದಿದ್ದಾರೆ.