ಬೆಂಗಳೂರು: ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರ ಹುಟ್ಟ ಹಬ್ಬವನ್ನು ಶ್ರೀ ಜಯಚಾಮರಾಜೇಂದ್ರ ಒಡೆಯರ್ ಕನ್ನಡ ಸಂಘ ಹಾಗೂ ಅಭಿಮಾನಿಗಳಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬೆಂಗಳೂರಿನ ಪ್ಯಾಲೆಸ್ ಗುಟ್ಟಳ್ಳಿ ರಂಗ ಮಂದಿರದಲ್ಲಿ ಈ ಕಾರ್ಯಕ್ರಮ ನಡೆಯಿತು. ಶಾಸಕ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ಅವರ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಇಂದು ಒಡೆಯರ್ ಸಂಘದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ “ಕಾಯಕಶ್ರೀ” ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಂಘದ ಅಧ್ಯಕ್ಷ ವೇಣು ಕುಮಾರ್ ಮುಂದಾಳತ್ವದಲ್ಲಿ ಅಶ್ವಥ್ ನಾರಾಯಣ್ 56ನೇ ಜನ್ಮದಿನಾಚರಣೆ ಆಚರಿಸಲಾಯಿತು. ಮಲ್ಲೇಶ್ವರಂ ಸುತ್ತಮುತ್ತಲಿನ ಹತ್ತನೇ ತರಗತಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಪೂರಕ ಸಾಮಾಗ್ರಿಯನ್ನು ಅಶ್ವಥ್ ನಾರಾಯಣ್ ಮೂಲಕ ವಿತರಿಸಲಾಯಿತು.
ವಿಶೇಷವಾಗಿ ನಾನಾ ವಿಭಾಗದಲ್ಲಿ ನಿಸ್ವಾರ್ಥ ಸೇವೆಗೈದ ಸಾಧಕರಿಗೆ ಒಡೆಯರ್ ಕನ್ನಡ ಸಂಘದ ವತಿಯಿಂದ ಶಾಸಕ ಅಶ್ವಥನಾರಾಯಣ್ ಮೂಲಕ “ಕಾಯಕಶ್ರೀ” ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಮಾತನಾಡಿದ ಶಾಸಕ ಅಶ್ವತ್ಥನಾರಾಯಣ, ಕಾರ್ಯಕ್ರಮ ಆಯೋಜಿಸಿದ, ಭಾಗವಹಿಸಿ ಹಾಗೂ ಹುಟ್ಟ ಹಬ್ಬಕ್ಕೆ ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ತಮ್ಮ ಮೇಲೆ ವಿಶ್ವಾಸವಿಟ್ಟ ಜನರ ನಂಬಿಕೆಯನ್ನು ಉಳಿಸಿಕೊಳ್ಳುವುದಾಗಿ ಈ ವೇಳೆ ಭರವಸೆ ನೀಡಿದರು.

ಕಾರ್ಯಕ್ರಮಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಆಗಮಿಸಿ ಶುಭ ಕೋರಿರುವುದು ಕೂಡ ವಿಶೇಷವಾಗಿತ್ತು. ಸಾಧಕರನ್ನು ಪ್ರತಾಪ್ ಸಿಂಹ ಅಭಿನಂದಿಸಿ, ಗುಣಗಾನ ಮಾಡಿದರು. ಸುಶೀಲ, ವೆಂಕಟೇಶ್, ವಿಜಯಲಕ್ಷ್ಮೀ, ಆಶಾ, ಡಾ. ಎಸ್. ಬಾಲಕೃಷ್ಣ, ಅಬ್ದುಲ್ ಮುನಿರ್, ನಾರಾಯಣ ಅವರನ್ನು ಸನ್ಮಾನಿಸಲಾಯಿತು. ಸಂಘದ ಸರ್ವ ಸದಸ್ಯರು ಈ ಸಂದರ್ಭದಲ್ಲಿ ಇದ್ದರು.