ವಿಜಯಪುರ: ಬಿಜೆಪಿ ಆಡಳಿತ ಇರುವ ರಾಜ್ಯದಲ್ಲಿನ ಜನ ಚಿನ್ನದ ತಟ್ಟೆಯಲ್ಲಿ ಊಟ ಮಾಡ್ತಿದ್ದಾರಾ ಎಂದು ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಗಾದರೆ ಬಿಜೆಪಿ ಕಾಲದಲ್ಲಿ ಯಾಕೆ ಸಾಲ ಹೆಚ್ಚಾಯ್ತು. ದೆಹಲಿಯಲ್ಲಿ ಉಸಿರಾಡೋಕೂ ಆಗುತ್ತಿಲ್ಲ. ದೆಹಲಿಗೆ ಒಮ್ಮೆಯೂ ಭೇಟಿ ನೀಡಲು ಆಗುವುದಿಲ್ಲ. ಅಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೂ ಮೋದಿಗೆ ಕರ್ನಾಟಕದ ಮೇಲೆ ಕಣ್ಣು ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಜಯನಗರ ಸಾಮ್ರಾಜ್ಯದ ಕಟ್ಟಿದ ಹಕ್ಕ ಬುಕ್ಕ ಬಿಜೆಪಿ ರಾಜ್ಯಗಳಲ್ಲೇ ಹೋಗಿದ್ದಾರಾ? ಬರೀ ಅವರ ಪಿಚ್ಚರ್ ಓಡ್ತಾ ಇದೆ. ಚಲ್ನೆ ದೋ ಚಲ್ನೆ ದೋ ಎಂದು ವ್ಯಂಗ್ಯವಾಡಿದರು. ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕಾಗಿ 6500 ಕೋಟಿ ಖರ್ಚು ಮಾಡಿದ್ದಾರೆ. ಖೇಲೋ ಇಂಡಿಯಾಗೆ ಹೆಚ್ಚಿನ ಹಣ ಕೊಡಲಿಲ್ಲ. 450 ಕೋಟಿ ಗುಜರಾತ್ ಗೆ ಕೊಟ್ಟಿದ್ದಾರೆ. ಖೇಲೋ ಇಂಡಿಯಾದಲ್ಲಿ ಒಂದು ಪದಕ ಬರಲಿಲ್ಲ. 50 ಕೋಟಿ ಕೊಟ್ಟ ಹರಿಯಾಣ ಪದಕ ಗೆದ್ದಿತು. ಅವರ ಪಕ್ಕ ಯಾರು ಇರುವಂತಿಲ್ಲ. ಫಾರಿನ್ ಮಿನಿಸ್ಟ್ರೂ ಅವರ ಜೊತೆ ಹೋಗುವಂತಿಲ್ಲ. ಯಾವ ಕಾರ್ಯದರ್ಶಿಗಳೂ ಅವರ ಪಕ್ಕ ಹೋಗಲ್ಲ ಎಂದು ಗುಡುಗಿದ್ದಾರೆ.
ಈ ದೇಶ ಒಂದು ಧರ್ಮದ ರಾಷ್ಟ್ರ. ಆದರೆ, ಅದಕ್ಕಿಂತ ಅಪಾಯ ಮತ್ತೊಂದಿಲ್ಲ. ಆದ್ರೆ ಅದಕ್ಕಿಂತ ಅಪಾಯ ಮತ್ತೊಂದಿಲ್ಲ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅಂಬೇಡ್ಕರ್ ಸಂವಿಧಾನದಲ್ಲಿ ಅದೇ ಇರೋದು ಅಲ್ವಾ? ಮೊದಲು ಹಿಂದೂ ಅನ್ನುವ ಪದವೇ ಇರಲಿಲ್ಲ. ಮೊದಲೆಲ್ಲ ಜಾತಿ ವ್ಯವಸ್ಥೆ ವರ್ಣಾಶ್ರಮ ಆಧಾರದ ಮೇಲೆ ಗುರುತಿಸಲಾಗುತ್ತಿತ್ತು. ಹಿಂದು ಅನ್ನೋ ಪದ ಮೊದಲು ಬಳಸಿದವರೆ ಅಂಬೇಡ್ಕರ್ ಹಿಂದು ಬಿಲ್ ತಂದವರು ಅವರೇ ಎಂದು ಹೇಳಿದ್ದಾರೆ.