ಬೆಂಗಳೂರು: ಡಿಜಿ ಐಜಿಪಿ ಡಿಜಿಐಜಿಪಿ ಅಲೋಕ್ ಮೋಹನ್ ಅಧಿಕಾರ ವಿಸ್ತರಣೆಯಾಗುವ ಸಾಧ್ಯತೆ ಇದೆ.
4 ತಿಂಗಳು ಅಧಿಕಾರ ವಿಸ್ತರಣೆಗೆ ಡಿಜಿಐಜಿಪಿ ಅಲೋಕ್ ಮೋಹನ್ ಮನವಿ ಮಾಡಿದ್ದರು. ಆದರೆ, ಇದೇ ತಿಂಗಳು 30 ರಂದು ಅಲೋಕ್ ಮೋಹನ್ ನಿವೃತ್ತಿಯಾಗಬೇಕಿತ್ತು. ಸುಪ್ರೀಂಕೋರ್ಟ್ ಆದೇಶ ಮುಂದಿಟ್ಟು ನಾಲ್ಕು ತಿಂಗಳ ಅಧಿಕಾರ ವಿಸ್ತರಣೆಗೆ ಅಲೋಕ್ ಮೋಹನ್ ಮನವಿ ಮಾಡಿದ್ದರು.
ಹೀಗಾಗಿ ಸೋಮವಾರ ಹೊಸ ಡಿಜಿಐಜಿಪಿ ನೇಮಕವಾಗುವುದರ ಕುರಿತು ಹಾಗೂ ವಿಸ್ತರಣೆ ಮಾಡುವುದರ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಏ. 30 ರಂದು ಬಸವ ಜಯಂತಿ ಸರ್ಕಾರಿ ರಜೆ ಹಿನ್ನಲೆ ಸೋಮವಾರ ನಿರ್ಧಾರ ಸಾಧ್ಯತೆ ಇದೆ.