ಬೆಂಗಳೂರು: ಕೇಂದ್ರ ಸರ್ಕಾರದ ಎನ್ ಟಿಪಿಸಿ ಗ್ರೀನ್ ಎನರ್ಜಿ ಲಿಮಿಟೆಡ್ ಕಂಪನಿಯಲ್ಲಿ ಎಕ್ಸಿಕ್ಯೂಟಿವ್ ಹಾಗೂ ಎಂಜನಿಯರ್ ಸೇರಿ ಹಲವು 182 ಹುದ್ದೆಗಳ (NGEL Recruitment 2025) ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಏಪ್ರಿಲ್ 11ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಮೇ 01ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಲು ಬಯಸುವವರು ngel.in. ವೆಬ್ ಸೈಟ್ ಗೆ ಭೇಟಿ ನೀಡಬಹುದು.
ಯಾವ ಹುದ್ದೆಗಳು ಎಷ್ಟು ಖಾಲಿ?
ಎಂಜಿನಿಯರ್ (ಸಿವಿಲ್) 40
ಎಂಜಿನಿಯರ್ (ಎಲೆಕ್ಟ್ರಿಕಲ್) 80
ಎಂಜಿನಿಯರ್ (ಮೆಕ್ಯಾನಿಕಲ್) 15
ಎಕ್ಸಿಕ್ಯೂಟಿವ್ (ಹ್ಯೂಮನ್ ರಿಸೋರ್ಸ್) 7
ಎಕ್ಸಿಕ್ಯೂಟಿವ್ (ಫೈನಾನ್ಸ್) 26
ಎಂಜಿನಿಯರ್ (ಐಟಿ) 04
ಎಂಜಿನಿಯರ್ (ಮಟಿರಿಯಲ್) 10
ವಿದ್ಯಾರ್ಹತೆ ಏನು?
ಎಂಜಿನಿಯರ್ (ಸಿವಿಲ್) ವಿಭಾಗಕ್ಕೆ ಅರ್ಜಿ ಸಲ್ಲಿಸುವವರು ಸಿವಿಲ್ ಎಂಜಿನಿಯರಿಂಗ್ ನಲ್ಲಿ ಬಿಇ, ಬಿ.ಟೆಕ್ ಕೋರ್ಸ್ ಮುಗಿಸಿರಬೇಕು. ಎಂಜಿನಿಯರ್ (ಎಲೆಕ್ಟ್ರಿಕಲ್)ಗೆ ಅರ್ಜಿ ಸಲ್ಲಿಸುವವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಬಿಇ, ಬಿ.ಟೆಕ್ ಅಧ್ಯಯನ ಮಾಡಿರಬೇಕು. ಎಂಜಿನಿಯರ್ (ಮೆಕ್ಯಾನಿಕಲ್)ಗೆ ಅರ್ಜಿ ಸಲ್ಲಿಸುವವರು ಮೆಕ್ಯಾನಿಕಲ್ ನಲ್ಲಿ ಬಿಇ, ಬಿ.ಟೆಕ್ ಕೋರ್ಸ್ ಮುಗಿಸಿರಬೇಕು.
ಹಾಗೆಯೇ, ಎಕ್ಸಿಕ್ಯೂಟಿವ್ (ಹ್ಯೂಮನ್ ರಿಸೋರ್ಸ್) ವಿಭಾಗದಲ್ಲಿ ಅರ್ಜಿ ಸಲ್ಲಿಸುವವರು ಎಚ್ ಆರ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಎಕ್ಸಿಕ್ಯೂಟಿವ್ (ಫೈನಾನ್ಸ್) ಆಗಲು ಬಯಸುವವರು ಸಿಎ, ಸಿಎಂಎ ತೇರ್ಗಡೆ ಹೊಂದಿರಬೇಕು. ಹೀಗೆ ಪ್ರತಿಯೊಂದು ಹುದ್ದೆಗಳಿಗೂ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.
ಮೊದಲಿಗೆ ಆನ್ ಲೈನ್ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಇದಾದ ನಂತರ ನೇಮಕಾತಿ ಆದೇಶ ನೀಡಲಾಗುತ್ತದೆ. ಜನರಲ್, ಒಬಿಸಿ, ಇಡಬ್ಲ್ಯೂಎಸ್ ನವರಿಗೆ 500 ರೂಪಾಯಿ ಅರ್ಜಿ ಶುಲ್ಕ ಇದೆ. ಎಸ್ಸಿ, ಎಸ್ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.