ಮಂಡ್ಯ: ಸೀಟ್ ಬೆಲ್ಟ್ ಧರಿಸದೇ ಸಂಚರಿಸುತ್ತಿದ್ದ ಗೂಡ್ಸ್ ವಾಹನ ಚಾಲಕನಿಗೆ ಭಾರೀ ದಂಡ ಹಾಕಿರುವ ವಿಚಾರ ಬೆಳಕಿಗೆ ಬಂದಿದೆ.
ಗೂಡ್ಸ್ ವಾಹನ ಚಾಲಕ ಸೀಟ್ ಬೆಲ್ಟ್ ಧರಿಸಿದೆ 36 ಬಾರಿ ಸಂಚಾರ ಮಾಡಿ, ನಿಯಮ ಉಲ್ಲಂಘಿಸಿದ್ದರಿಂದಾಗಿ ಚಾಲಕನಿಗೆ ಮಂಡ್ಯದ ಸಂಚಾರ ಪೊಲೀಸರು 18 ಸಾವಿರ ರೂ. ದಂಡ ವಿಧಿಸಿದ್ದಾರೆ.
ಮೈಸೂರು ನಗರದ ನೋಂದಣಿ ಹೊಂದಿದ್ದ ಈ ಗೂಡ್ಸ್ ವಾಹನದಲ್ಲಿ ಗ್ಯಾಸ್ ಸಿಲಿಂಡರ್ ಗಳನ್ನು ಸರಬರಾಜು ಮಾಡಲಾಗುತ್ತಿತ್ತು. ಈ ಚಾಲಕ ಪ್ರತಿ ಬಾರಿ ವಾಹನ ಚಲಾಯಿಸುವಾಗಲೂ ಸೀಟ್ ಬೆಲ್ಟ್ ಧರಿಸದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ 36 ಬಾರಿಯೂ ದಂಡ ಹಾಕಲಾಗಿದೆ. ಪ್ರತಿ ಬಾರಿ 500 ರೂ.ನಂತೆ 36 ಬಾರಿ ಉಲ್ಲಂಘನೆಗೆ 18 ಸಾವಿರ ರೂ. ದಂಡ ವಿಧಿಸಲಾಗಿದೆ. ಮಂಗಳವಾರ ಚಾಲಕ ದಂಡದ ರಶೀದಿ ಪಡೆದಿದ್ದಾನೆ. ಅಲ್ಲದೇ, ದಂಡ ತೆತ್ತ ಚಾಲಕನಿಗೆ ಸಂಚಾರ ಪೊಲೀಸರು ಎಚ್ಚರಿಕೆ ನೀಡಿ, ಸಂಚಾರ ನಿಯಮ ಪಾಲಿಸುವಂತೆ ತಿಳಿವಳಿಕೆ ನೀಡಿದ್ದಾರೆ.