ಶರಣಾಗತರಾದ 6 ಜನ ನಕ್ಸಲರಿಗೆ ಎನ್ ಐಎ ವಿಶೇಷ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಕೋರ್ಟ್ ಗೆ ಹಾಜರು ಪಡಿಸುವುದಕ್ಕೂ ಮುನ್ನ ನಕ್ಸಲರನ್ನು ವಿಕ್ಟೋರಿಯಾ(victoria) ಆಸ್ಪತ್ರೆಗೆ ಕೆರೆದುಕೊಂಡು ಹೋಗಲಾಗಿತ್ತು. ಅಲ್ಲಿ ವೈದ್ಯಕೀಯ ಪರೀಕ್ಷೆಯ ನಂತರ ಸೆಷನ್ಸ್ ಕೋರ್ಟ್ ಗೆ ಕರೆದುಕೊಂಡು ಹೋಗಲಾಯಿತು. ಶರಣಾಗತರಾದ 6 ಜನ ನಕ್ಸಲರನ್ನು ಚಿಕ್ಕಮಗಳೂರು(chikkamagalur) ಪೊಲೀಸರು(police) ಸೆಷನ್ಸ್ ಕೋರ್ಟ್ ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.
ಈ ವೇಳೆ ತಮ್ಮ ಕೇಸ್(case) ಗಾಗಿ ಶರಣಾಗತ ನಕ್ಸಲರು ವಕೀಲರನ್ನು(lawyers) ನೇಮಿಸಿಕೊಂಡರು. ಕೋರ್ಟ್ ನಲ್ಲಿ ಶರಣಾಗತ ನಕ್ಸಲರಾದ ಮುಡಗಾರು ಲತಾ, ಸುಂದ್ರಿ ಕೊತ್ಲೂರು, ವನಜಾಕ್ಷಿ ಬಾಳೆಹೊಳೆ, ಜಿಶಾ, ವಸಂತ್, ಮಾರೆಪ್ಪ ಅರೋಲಿ ಎಂಬುವವರಿಂದ ವಕೀಲರು ವಕಾಲತ್ ಗೆ ಸಹಿ ಹಾಕಿಸಿಕೊಂಡರು. ಆನಂತರ ನ್ಯಾಯಾಧೀಶರು 6 ಜನ ಶರಣಾಗತ ನಕ್ಸಲರಿಗೆ 14 ದಿನಗಳ ನ್ಯಾಯಾಂಗ ಬಂಧನ(Judicial custody) ವಿಧಿಸಿ ಆದೇಶ ಹೊರಡಿಸಿದರು.