ಬಾಗಲಕೋಟೆ: ಸರ್ಕಾರಿ ಹುದ್ದೆಗಳ ಹುಡುಕಾಟದಲ್ಲಿರುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಬಾಗಲಕೋಟೆಯಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯಲ್ಲಿ ಖಾಲಿ ಇರುವ 131 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. karunadu.karnataka.gov.in/hfw ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಜೂನ್ 17 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಹುದ್ದೆಗಳ ವಿವರ
ಸಂಸ್ಥೆ ಹೆಸರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಬಾಗಲಕೋಟೆ
ಒಟ್ಟು ಹುದ್ದೆ : 131
ಉದ್ಯೋಗ ಸ್ಥಳ : ಬಾಗಲಕೋಟೆ
ಹುದ್ದೆಗಳ ಹೆಸರು : ವೈದ್ಯಕೀಯ ಅಧಿಕಾರಿ, ನರ್ಸ್, ತಾಂತ್ರಿಕ ಸಹಾಯಕರು, ಸಲಹೆಗಾರರು
ಅರ್ಜಿಯ ವಿಧ : ಆನ್ ಲೈನ್
ಕೊನೆಯ ದಿನಾಂಕ : ಜೂನ್ 17
ಎಂಬಿಬಿಎಸ್, ಬಿಎಎಂಎಸ್, ಬಿಎಸ್ಸಿ ನರ್ಸಿಂಗ್ ಎಸ್ಸೆಸ್ಸೆಲ್ಸಿ, ಪಿಯುಸಿ… ಹೀಗೆ ಆಯಾ ಹುದ್ದೆಗಳಿಗೆ ತಕ್ಕಂತೆ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳಿಗೆ ಹುದ್ದೆಯ ಪ್ರಕಾರ ಗರಿಷ್ಠ ವಯಸ್ಸು 35 ರಿಂದ 65 ವರ್ಷಗಳವರೆಗೆ ಇದೆ.
ಒಬಿಸಿ ಸಮುದಾಯದವರಿಗೆ 3 ವರ್ಷ ಹಾಗೂ ಎಸ್ಸಿ, ಎಸ್ಟಿ, ಕೆಟಗರಿ-1 ಹುದ್ದೆಗಳಿಗೆ 5 ವರ್ಷಗಳ ಸಡಿಲಿಕೆ ಇದೆ. ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ 15 ಸಾವಿರ ರೂಪಾಯಿಯಿಂದ 1.4 ಲಕ್ಷ ರೂಪಾಯಿವರೆಗೆ ಸಂಬಳ ನೀಡಲಾಗುತ್ತಿದೆ.