ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ, ಕರ್ನಾಟಕದ ಬೆಂಗಳೂರಿನಲ್ಲೇ ಇರುವ ಹಿಂದೂಸ್ಥಾನ್ ಮಷೀನ್ ಟೂಲ್ಸ್ (HMT Limited Recruitment 2025) ಕಂಪನಿಯಲ್ಲಿ ಖಾಲಿ ಇರುವ 12 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಗಸ್ಟ್ 11ರೊಳಗೆ ಅರ್ಜಿ ಸಲ್ಲಿಸುವ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ಹಿಂದೂಸ್ಥಾನ್ ಮಷೀನ್ ಟೂಲ್ಸ್ ಲಿಮಿಟೆಡ್
ಒಟ್ಟು ಹುದ್ದೆಗಳು: 12
ಉದ್ಯೋಗ ಸ್ಥಳ: ಬೆಂಗಳೂರು
ಹುದ್ದೆಗಳ ಹೆಸರು: ಆಫೀಸರ್, ಡೆಪ್ಯೂಟಿ ಮ್ಯಾನೇಜರ್
ಅರ್ಜಿ ಸಲ್ಲಿಕೆ ವಿಧಾನ: ಆಫ್ ಲೈನ್
ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ವೇತನವನ್ನು ನಿಗದಿಪಡಿಸಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವನ್ನು ನಿಗದಿಪಡಿಸಿಲ್ಲ.
ಯಾವ ಹುದ್ದೆ ಎಷ್ಟು ಖಾಲಿ?
ಡೆಪ್ಯೂಟಿ ಮ್ಯಾನೇಜರ್ (Finance) 9
ಆಫೀಸರ್ (Company Secretary) 1
ಆಫೀಸರ್ (Legal) 1
ಹಿಂದಿ ಆಫೀಸರ್ 1
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ಅಧಿಕೃತ ವೆಬ್‌ಸೈಟ್ ಆಗಿರುವ https://www.hmtindia.com/ ಗೆ ಭೇಟಿ ನೀಡಬೇಕು.
HMT Limited ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕು.
ಹುದ್ದೆಯ ಅಧಿಸೂಚನೆಯನ್ನು ಓದಿಕೊಂಡು, ಅರ್ಹತೆ ಪರಿಶೀಲಿಸಬೇಕು.
ಆನ್ ಲೈನ್ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು.
ಎಲ್ಲ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕು.
ಶುಲ್ಕ ಪಾವತಿ ಮಾಡಬೇಕು.
ಸಬ್ಮಿಟ್ ಮಾಡಿದ ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಬೇಕು.
ಅರ್ಜಿ ನಮೂನೆ ಮತ್ತು ದಾಖಲೆಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ
HMT Limited, Regd. Office: “HMT Bhavan”, #.59, Bellary Road, Bengaluru – 560032