ನವದೆಹಲಿ : ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ ಹಾಗೂ ರಷ್ಯಾದ ಯುನೈಟೆಡ್ ಏರ್ಕ್ರಾಫ್ಟ್ ಕಾರ್ಪೊರೇಶನ್ ಸಂಸ್ಥೆ ನಡುವೆ ತಿಳಿವಳಿಕೆ ಒಪ್ಪಂದ ಏರ್ಪಟ್ಟಿದೆ. ಇದರ ಪ್ರಕಾರ ಭಾರತದಲ್ಲಿ ಎಸ್ಜೆ-100 ಎನ್ನುವ ಪ್ಯಾಸೆಂಜರ್ ವಿಮಾನವನ್ನು ತಯಾರಿಸಲಾಗುತ್ತದೆ. ಮಾಸ್ಕೋದಲ್ಲಿ ಅಕ್ಟೋಬರ್ 27ರಂದು ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಎಚ್ಎಎಲ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದರೊಂದಿಗೆ ಭಾರತೀಯ ಕಂಪನಿಯೊಂದು 3-4 ದಶಕಗಳ ನಂತರ ಮೊದಲ ಬಾರಿಗೆ ಪರಿಪೂರ್ಣ ಪ್ರಯಾಣಿಕ ವಿಮಾನ ತಯಾರಿಕೆ ಮಾಡುವ ಅವಕಾಶ ಸಿಕ್ಕಂತಾಗಿದೆ.ಈ ಹಿಂದೆ ಯುನೈಟೆಡ್ ಕಿಂಗ್ಡಂನ ಆವ್ರೋ ಕಂಪನಿಯ ಎಚ್ಎಸ್748 ಎನ್ನುವ ವಿಮಾನವನ್ನು ಇದೇ ಎಚ್ಎಎಲ್ ಸಹಯೋಗದಲ್ಲಿ ಭಾರತದಲ್ಲಿ ತಯಾರಿಸಲಾಗಿತ್ತು.
ಈ ವಿಮಾನ ಕಂಪನಿಯು ಎಸ್ಜೆ-100 ಅಥವಾ ಸುಖೋಯ್ ಸೂಪರ್ ಜೆಟ್-100 ವಿಮಾನದ ತಯಾರಿಕೆ ಕಳೆದ 20 ವರ್ಷಗಳಿಂದ ಆಗುತ್ತಿದೆ. ಸದ್ಯ 200ಕ್ಕೂ ಹೆಚ್ಚು ಈ ವಿಮಾನಗಳನ್ನು ತಯಾರಿಸಲಾಗಿದೆ. 16ಕ್ಕೂ ಅಧಿಕ ಏರ್ಲೈನ್ ಕಂಪನಿಗಳು ಈ ವಿಮಾನಗಳನ್ನು ಬಳಸುತ್ತಿವೆ.
ಇದನ್ನೂ ಓದಿ : ರಷ್ಯಾದ ಕ್ರೂಸ್ ಕ್ಷಿಪಣಿ “ಬ್ಯೂರೆವೆಸ್ಟ್ನಿಕ್” ಪರೀಕ್ಷೆ ಯಶಸ್ವಿ



















