ನಮ್ಮ ಮೆಟ್ರೋ ನಿಲ್ದಾಣದಲ್ಲಿ 10 ಸ್ವಯಂ ಚಾಲಿತ ಟಿಕೆಟ್ ಯಂತ್ರವನ್ನು ಅಳವಡಿಸಲಾಗಿದೆ. 3 ಕ್ಲಿಕ್ ಮಾಡಿದರೆ ಸಾಕು ನಿಮ್ಮ ಕೈಯಲ್ಲಿ ಟಿಕೆಟ್ ಸಿಗಲಿದೆ. ಈ ಒಂದು ಯೋಜನೆಗೆ ನಮ್ಮ ಮೆಟ್ರೋ ಮುಂದಾಗಿದೆ.
ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ 10 ಹೊಸ ಸ್ವಯಂ ಸೇವಾ ಟಿಕೆಟ್ ಯಂತ್ರ ಅಳವಡಿಕೆ ಮಾಡಲಾಗಿದೆ. ಕ್ಯೂಆರ್ ಕೋಡ್ ಆಧಾರಿತ ಟಿಕೆಟ್ ಯಂತ್ರದ ಮೂಲಕ ತ್ವರಿತ ಟಿಕೆಟ್ ಸಿಗುವಂತೆ ಮಾಡಲಾಗುತ್ತಿದೆ. ಮೂರರಿಂದ ನಾಲ್ಕು ಕ್ಲಿಕ್ನಲ್ಲಿ ಟಿಕೆಟ್ ಕೈಗೆ ಸಿಗಲಿದೆ. ಬೆಂಗಳೂರು ಮೆಟ್ರೋ ರೈಲು ನಿಗಮವು ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಾಣ ಮಾಡಲಾಗಿದೆ.
ಈ ಮೂಲಕ ಕೇವಲ 30 ಸೆಕೆಂಡ್ ಗಳಲ್ಲಿ ಟಿಕೆಟ್ ಪಡೆಯಬಹುದು. ಯುಪಿಐ ಮೂಲಕ ಪಾವತಿ ಮಾಡಿ ಕ್ಯೂಆರ್ ಟಿಕೆಟ್ ಪಡೆಯಬಹುದು. ಅಲ್ಲದೇ, ಪ್ರಯಾಣದ ನಂತರ ಟಿಕೆಟ್ ಅನ್ನು ಕಸದ ಬುಟ್ಟಿಗೆ ಹಾಕಲು ಬಿಎಂಆರ್ ಸಿಎಲ್ ಮನವಿ ಮಾಡಿದೆ.