ತುಮಕೂರು: ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಸೈಬರ್ ವಂಚಕರು ಮಾತ್ರ ಗಾಳ ಹಾಕಿ ಜನರನ್ನು ಮೋಸಗೊಳಿಸುತ್ತಿರುವುದು ನಡೆಯುತ್ತಲೇ ಇದೆ.
ಜಿಲ್ಲೆ (Tumakur) ಯಲ್ಲಿ ಕಳೆದ ಆರು ತಿಂಗಳಲ್ಲಿ ನೂರಕ್ಕೂ ಹೆಚ್ಚು ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಪರಿಣಾಮ 10 ಕೋಟಿ ರೂ.ಗೂ ಅಧಿಕ ಹಣ ವಂಚಿಸಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಮೂರು ವರ್ಷದ ಸೈಬರ್ ವಂಚನೆಯ ಅಂಕಿ ಅಂಶಗಳನ್ನು ನೋಡಿದರೆ 2023ರಲ್ಲಿ 252 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 8.91 ಕೋಟಿ ರೂ. ವಂಚನೆಯಾಗಿದೆ. ಆದರೆ, ತನಿಖೆಯಿಂದ 2 ಕೋಟಿ ರೂ. ರಿಕವರಿ ಮಾಡಲಾಗಿದೆ. ಆದರೆ, ಕಳೆದ ವರ್ಷ ವಂಚಕರು ಬರೋಬ್ಬರಿ 314 ಸೈಬರ್ ಪ್ರಕರಣಗಳು ದಾಖಲಾಗಿದ್ದು, ಬರೊಬ್ಬರಿ 25 ಕೋಟಿ ರೂ. ವಂಚಿಸಲಾಗಿತ್ತು.
ಇಲ್ಲಿಯವರೆಗೆ ಸೈಬರ್ ವಂಚನೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಕೋಟಿ ರೂ. ಹಣ ಫ್ರೀಜ್ ಮಾಡಿಸುವುದರ ಜೊತೆಗೆ 2 ಕೋಟಿ ರೂ. ಹಣ ಕಳೆದುಕೊಂಡವರಿಗೆ ಹಿಂತಿರುಗಿಸಲಾಗಿದೆ