ಬೆಂಗಳೂರು: ಸೈಬರ್ ವಂಚನೆಯ ಬಗ್ಗೆ ಸಾಕಷ್ಟು ಎಚ್ಚರಿಕೆ ಹಾಗೂ ಜಾಗೃತಿ ಮೂಡಿಸಿದರು ಜನರು ಮಾತ್ರ ಮೋಸ ಹೋಗುತ್ತಿರುವುದು ದುರ್ದೈವದ ಸಂಗತಿ. ಅದರಲ್ಲೂ ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ವಂಚನೆಗೆ ಒಳಗಾಗುತ್ತಿರುವುದು ನೋವಿನ ಸಂಗತಿ. ವ್ಯಕ್ತಿಯೊಬ್ಬರಿಗೆ ವಾಟ್ಸ್ ಆಪ್ ಕರೆ ಮಾಡಿ ಮೋಸಗೊಳಿಸಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮುಂಬೈ ಮೂಲದ ವೃದ್ಧರೊಬ್ಬರಿಗೆ ಬೆದರಿಕೆ ಹಾಕುವ ಮೂಲಕ ವಂಚಕರು 1. 94 ಕೋಟಿ ರೂ. ಎಗರಿಸಿದ್ದಾರೆ. ಈ ಕುರಿತು ಆಗ್ನೇಯ ವಿಭಾಗದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚಕರು ಪೊಲೀಸ್ ಅಧಿಕಾರಿಯ ಬಟ್ಟೆ ಹಾಗೂ ಠಾಣೆ ಮಾದರಿಯಲ್ಲಿ ಕೋಣೆಯನ್ನು ಸಿದ್ದಮಾಡಿಕೊಂಡಿದ್ದಾರೆ. ಕಳೆದ ನವೆಂಬರ್ ನಲ್ಲಿ ವೃದ್ಧಗೆ ವಾಟ್ಸ್ ಆ್ಯಪ್ ಕಾಲ್ ಮಾಡಿ, ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಎಂದು ನಂಬಿಸಿ ವಿಡಿಯೋ ಕಾಲ್ ಮೂಲಕ ಅವರನ್ನು ಪೊಲೀಸರಂತೆ ನಂಬಿಸಿದ್ದಾರೆ.
ಉದ್ಯಮಿ ನರೇಶ್ ಗೋಯಲ್ ಮನಿಲ್ಯಾಂಡರಿಂಗ್ ಪ್ರಕರಣದಲ್ಲಿ ನಿಮ್ಮ ಪಾತ್ರ ಇದೆ ಎನ್ನಲಾಗಿದೆ. ಹವಾಲ ತನಿಖೆ ವೇಳೆ 247 ಸಿಮ್ಗಳು ವಶಕ್ಕೆ ಪಡೆಯಲಾಗಿತ್ತು. ಆ ಪೈಕಿ ಒಂದು ಸಿಮ್ ನಿಮ್ಮ ಹೆಸರಲ್ಲಿದೆ ಎಂದು ವೃದ್ಧರನ್ನು ಹೆದರಿಸಿದ್ದಾರೆ. ಹೀಗಾಗಿ ಮುಂಬೈ ಅಪರಾಧ ವಿಭಾಗಕ್ಕೆ ವಿಚಾರಣೆಗೆ ಹಾಜರಾಗಬೇಕು ಎಂದು ಹೆದರಿಸಿ, ವಂಚಿಸಿ ಹಣ ಪೀಕಿದ್ದಾರೆ