ಹೌದು, ಸಿನಿಮಾ ಪತ್ರಕರ್ತರಾಗಿ, ನಟರಾಗಿ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಿರುವ ಅಫ್ಜಲ್(ಸೂಪರ್ ಸ್ಟಾರ್ಸ್), “ಹೊಸತರ” ಎಂಬ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದುಕೊಂಡಿದ್ದಾರೆ.
“ಜೈವಿಜಯ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ “ಹೊಸತರ” ಚಿತ್ರದಲ್ಲಿ ಹೊಸ ತರಹದ ಕಥೆ ಇದೆ. ಸಿನಿಮಾದೊಳಗೊಂದು ಸಿನಿಮಾ ಇದೆ. ಲವ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲಾ ಅಂಶಗಳು ಚಿತ್ರದಲ್ಲಿದ್ದು, ಕಾಮಿಡಿ ತುಂಬಿರಲಿದೆ”. ಎಂದು ಚಿತ್ರತಂಡ ಹೇಳಿಕೊಂಡಿದೆ.
“ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಮೂರು ಹಾಡುಗಳು ಹಾಗೂ ಎರಡು ಸಾಹಸ ಸನ್ನಿವೇಶಗಳಿರಲಿವೆ. ರಾಜು ಎಮ್ಮಿಗನೂರು ಸಂಗೀತ ನಿರ್ದೇಶನ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಮಾಡಲಿದ್ದಾರೆ. ರಾಜೀವ್ ಗನೇಸನ್ ಛಾಯಾಗ್ರಹಣ, ಆಂಥೋನಿ ಪಯಾನೋ(ಕೆನಡಾ) ಹಿನ್ನೆಲೆ ಸಂಗೀತ ಹಾಗೂ ಬಾಬು ಶಿವಪುರ ಅವರ ಸಂಕಲನವಿರುವ ಈ ಚಿತ್ರಕ್ಕೆ ವಿಶೇಷವಾಗಿ ಅಮೇರಿಕಾದ “ಜೆ ಹೆಚ್ ಜೆ ಸ್ಟುಡಿಯೋ” ವಿಎಫ್ಎಕ್ಸ್ ಕೆಲಸ ಮಾಡಲಿದೆ. ಹೀಗೆ ಹೆಸರಾಂತ ತಂತ್ರಜ್ಞರು ಈ ಚಿತ್ರದಲ್ಲಿ ಕಾರ್ಯನಿರ್ವಹಿಸಲಿದ್ದು, ಉತ್ತಮ ಗುಣಮಟ್ಟದಲ್ಲಿ ಚಿತ್ರ ಮೂಡಿ ಬರಲಿದೆ. ಹಾಗೆಯೇ, ತಾರಾಬಳಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡುವುದಾಗಿ” ನಿರ್ದೇಶಕ ಅಫ್ಜಲ್ ತಿಳಿಸಿದ್ದಾರೆ.
