ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ನಟ ರಾಮ್ ಚರಣ್, ಕುಟುಂಬ ಸಮೇತರಾಗಿ ತಿರುಪತಿ ವೆಂಕಟೇಶ್ವರನ ದರ್ಶನ ಮಾಡಿದ್ದಾರೆ. ಸದ್ಯ ಅವರು ತಿಮ್ಮಪ್ಪನ ದರ್ಶನ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ರಾಮ್ ಚರಣ್ ಅವರು ಪ್ರತಿ ವರ್ಷ ಹುಟ್ಟು ಹಬ್ಬದ ದಿನದಂದು ತಿರುಪತಿಗೆ ಭೇಟಿ ನೀಡುತ್ತಾರೆ. ಈ ವರ್ಷವೂ ಸಂಪ್ರದಾಯ ಮುಂದುವರಿಸಿದ್ದಾರೆ. ಈ ವೇಳೆ ಕುಟುಂಬಸ್ಥರು ವೆಂಕಟೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.
ರಾಮ್ ಚರಣ್ ಅವರ ಜೊತೆ ಪತ್ನಿ ಉಪಾಸನಾ ಕೂಡ ಜೊತೆಯಿದ್ದರು. ಇತ್ತ ರಾಮ್ ಚರಣ್ ಆಗಮಿಸುತ್ತಾರೆ ಎಂಬ ಕಾರಣಕ್ಕೆ ಹೆಚ್ಚಿನ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ನೆರೆದವರು ತಮ್ಮ ನೆಚ್ಚಿನ ನಟನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಅಂದಹಾಗೆ, ‘ತಿಬ್ಬಲ್ ಆರ್’ ಸಿನಿಮಾ ಖ್ಯಾತಿಯ ನಂತರದಲ್ಲಿ ರಾಮ್ ಚರಣ್ ಫ್ಯಾನ್ಬೇಸ್ ಸಖತ್ ಸ್ಟ್ರಾಂಗ್ ಆಗಿದೆ. ಸಿಕ್ಕಾಪಟ್ಟೆ ಸಿನಿಮಾಗಳು ಅವರನ್ನು ಅರಸಿ ಬಂದರೂ, ಅವರು ಕಥೆಯಲ್ಲಿ ಚೂಸಿಯಾಗಿ ಅಳೆದು-ತೂಗಿ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಬುಚ್ಚಿಬಾಬು ಜೊತೆಗಿನ ಸಿನಿಮಾದ ಪೂಜೆ ನಡೆದಿದೆ.