ಕೇವಲ 20 ಸಾವಿರಕ್ಕೆ ಪತ್ನಿಯನ್ನೇ ಪತಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಜುವೇರಿಯಾ ಮುಲ್ಲಾ ಕೊಲೆಯಾದ ಮಹಿಳೆ. ಚಿಕ್ಕೋಡಿ ತಾಲೂಕಿನ ತಾಲೂಕಿನ ಕರೋಶಿ ಗ್ರಾಮದ ಜಾವೇದ್ ಮುಲ್ಲಾ ಅನ್ನೋರ ಜತೆಗೆ ಮದುವೆ ಆಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಆತ ಲಾರಿ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಆದರೆ, ಹಣಕ್ಕಾಗಿ ಪತ್ನಿ ಮತ್ತು ಅವರ ಮನೆಯವರನ್ನು ಪೀಡಿಸುತ್ತಿದ್ದ. ತವರು ಮನೆಗೆ ಪತ್ನಿ ಹೋಗಿದ್ದರಿಂದ ತಾನೂ ಹೋಗಿ, ಕುಡಿದು ಬಂದು 20 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ವಿಷಯವಾಗಿ ಜಗಳ ನಡೆದಿದೆ.
ಆನಂತರ ತವರು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆತ ಹಾಗೂ ಅವರ ಮನೆಯವರು ಕೊಲೆ ಮಾಡಿದ್ದಾರೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.