ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೇಲ್ ಪಡೆದು ಹೊರಗಿರುವ ನಟ ದರ್ಶನ್, ಸಾಕ್ಷಿ ಕಲೆ ಹಾಕುವ ಸಮಯದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ಹಣದ ವಾಪಾಸಾತಿಗಾಗಿ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.
57ನೇ ಸೆಷನ್ಸ್ ಕೋರ್ಟ್ ಗೆ ದರ್ಶನ್ ಹಾಗೂ ಪ್ರದೂಷ್ ಅರ್ಜಿ ಸಲ್ಲಿಸಿದ್ದು, ಒಟ್ಟು 40.40ಲಕ್ಷ ರೂ ಸೀಜ್ ಮಾಡಿದ್ದ ಹಣವನ್ನು ಮರಳಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಮಾಹಿತಿ ಕಲೆ ಹಾಕುವ ಸಂದರ್ಭದಲ್ಲಿ ಪ್ರದೂಷ್ ಹಾಗೂ ದರ್ಶನ್ ಸಂಬಂಧಿಸಿದಂತೆ ವಿಜಯಲಕ್ಷ್ಮಿ ಅವರಿಂದ ಹಣ ವಶಕ್ಕೆ ಪಡೆಯಲಾಗಿತ್ತು
ರೇಣುಕಾಸ್ವಾಮಿ ಕೊಲೆ ಕೇಸಿನ ಸಾಕ್ಷ್ಯನಾಶಕ್ಕಾಗಿ ಹಣ ಸಂಗ್ರಹ ಮಾಡಿಟ್ಟಿದ್ದ ಆರೋಪದಡಿ ಹಣ ವಶಕ್ಕೆ ಪಡೆಯಲಾಗಿತ್ತು. ಸದ್ಯ ಬೇಲ್ ಮೇಲೆ ಹೊರ ಬಂದಿರು ದರ್ಶನ್, ತುರ್ತಾಗಿ ಹಣ ಬೇಕಿದ್ದು ಪೊಲೀಸರಿಗೆ ಸೀಜ್ ಹಣ ಬಿಡುಗಡೆಗೆ ಸೂಚಿಸುವಂತೆ ಕೋರಿ, ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.