ಮಂಡ್ಯ : ಕಿಡಿಗೇಡಿಗಳಿಂದ ಹೆಚ್.ಡಿ.ಕೆ ಶಿಲನ್ಯಾಸ ನಾಮಫಲಕ ವಿಕೃತಗೊಳಿಸಿರುವ ಘಟನೆ ಮಂಡ್ಯ ತಾಲೂಕಿನ ಬಸರಾಳು ಗ್ರಾಮದಲ್ಲಿ ನಡೆದಿದೆ.
ಇತ್ತೀಚೆಗೆ ಗ್ರಾಮದಲ್ಲಿ ಸಂಸದ ಕುಮಾರಸ್ವಾಮಿ ಅನುದಾನದಲ್ಲಿ ನಿರ್ಮಿಸಿದ್ದ ಹೈ ಮಾಸ್ಟ್ ಲೈಟ್ ಅನ್ನು ಅವರ ಅನುಪಸ್ಥಿತಿಯಲ್ಲಿ ಜೆಡಿಎಸ್ ಮುಖಂಡರಿಂದ ಉದ್ಘಾಟನೆ ಮಾಡಲಾಗಿತ್ತು.
ನಿನ್ನೆ ತಡರಾತ್ರಿ ಕಿಡಿಗೇಡಿಗಳಿಂದ ಶಿಲನ್ಯಾಸ ಫಲಕದ ಮೇಲಿದ್ದ ಕುಮಾರಸ್ವಾಮಿ ಭಾವಚಿತ್ರ ಹಾಗೂ ಅಕ್ಷರಗಳನ್ನು ವಿರೂಪಗೊಳಿಸಿದ್ದಾರೆ. ಕಿಡಿಗೇಡಿಗಳ ಈ ದುಷ್ಕೃತ್ಯಕ್ಕೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಜೆಡಿಎಸ್ ಮುಖಂಡರು ಬಸರಾಳು ಪೊಲೀಸ್ ಠಾಣೆಗೆ ದೂರು ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.