ಹಕ್ಕಿ ಜ್ವರದ ಹಿನ್ನೆಲೆ; ಹಸಿ ಹಾಲು ಕುಡಿಯಬೇಡಿ: ಕೇಂದ್ರ
ಜಗತ್ತಿನ ಹಲವೆಡೆ ಹಕ್ಕಿಜ್ವರ ಕಾಣಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜನ ಸಾಮಾನ್ಯರಿಗೆ ಹಸಿ ಹಾಲು ಕುಡಿಯದಂತೆ ಮನವಿ ಮಾಡಿದೆ. ಮುಂದುವರೆದ ರಾಷ್ಟ್ರ ಆಮೇರಿಕಾದ ಎಂಟು ರಾಜ್ಯಗಳಲ್ಲಿ ಜಾನುವಾರುಗಳ ಹಾಲಲ್ಲಿ ಈ ವೈರಸ್ ಇರುವುದು ದೃಢ ಪಟ್ಟಿದೆ. ನಮ್ಮ ಭಾರತದ ಮಹಾರಾಷ್ಟ್ರ ,ಕೇರಳ, ಜಾರ್ಖಂಡ್ ನಲ್ಲಿ ಈ ಸೋಂಕು ಕಂಡು ಬಂದಿದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ, ಕೇಂದ್ರ ಸರ್ಕಾರ ಈ ವೈರಸ್ ತಡೆವ ನಿಟ್ಟಲ್ಲಿ ಹಾಲನ್ನು ಸರಿಯಾದ ಟೆಂಪ್ರೇಚರಿನಲ್ಲಿ ಕುದಿಸಿ ಕುಡಿಯುವಂತೆ ಜನರಲ್ಲಿ ಮನವಿಮಾಡಿದೆ.