ಬೆಂಗಳೂರು: ಸೊಂಟದಲ್ಲಿ ಗನ್ ಇದ್ದ ವ್ಯಕ್ತಿಯೊಬ್ಬ ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿದ್ದು, ಭದ್ರತಾ ವೈಫಲ್ಯಕ್ಕೆ ಆಕ್ರೋಶ ಕೇಳಿ ಬರುತ್ತಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಪ್ರಚಾರದ ವೇಳೆ ಗನ್ ಇಟ್ಟುಕೊಂಡು ಕ್ಯಾಂಟರ್ ಏರಿ ಸಿಎಂಗೆ ವ್ಯಕ್ತಿಯೊಬ್ಬ ಹಾರ ಹಾಕಿದ್ದಾನೆ. ಆದರೆ, ಆತನ ಬಳಿ ಗನ್ ಇರುವುದನ್ನು ಪೊಲೀಸರು ಗಮನಿಸಿಲ್ಲ.
ಗನ್ ಇಟ್ಟುಕೊಂಡು ಸಿಎಂಗೆ ಹಾರ ಹಾಕಿದ ವ್ಯಕ್ತಿಯನ್ನು ರಿಯಾಜ್ ಎಂದು ಗುರುತಿಸಲಾಗಿದೆ. ಸಿದ್ದಾಪುರದ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, 5 ವರ್ಷಗಳ ಹಿಂದೆ ರಿಯಾಜ್ ಮೇಲೆ ಕೊಲೆ ಯತ್ನವಾದ ನಂತರ ಗನ್ ಪರವಾನಿಗೆ ಪಡೆದಿದ್ದ.
ಸಿಎಂ ಬಳಿ ಗನ್ ತೆಗೆದುಕೊಂಡ ಹೋದ ವ್ಯಕ್ತಿ ಮೇಲೆ ಅನುಮಾನ ಮೂಡಿದ್ದು, ಚುನಾವಣಾ ಸಂದರ್ಭದಲ್ಲಿ ಗನ್ ಇಟ್ಟುಕೊಳ್ಳಲು ಅವಕಾಶ ಇಲ್ಲ. ತೀರಾ ಅವಶ್ಯಕತೆ ಇದ್ದರೆ ಮಾತ್ರ ಈ ಸಂದರ್ಭದಲ್ಲಿ ಇಟ್ಟುಕೊಳ್ಳಬಹುದು. ಬ್ಯಾಂಕ್ ಸಿಬ್ಬಂದಿ, ವಿಜ್ಞಾನಿಗಳು ತೀರಾ ಅವಶ್ಯಕತೆ ಇದ್ದವರಿಗೆ ಮಾತ್ರ ಗನ್ ಇಟ್ಟುಕೊಳ್ಳಲು ಅವಕಾಶವಿದೆ. ಆದರೆ, ಈ ವ್ಯಕ್ತಿ ಇಟ್ಟಿರುವ ಕುರಿತು ಹಲವೆಡೆ ಆಕ್ರೋಶ ವ್ಯಕ್ತವಾಗಿದೆ.