ಚಂಡೀಗಢ: ಸಿಖ್ (Sikh) ಧರ್ಮದ ಪವಿತ್ರ ಗ್ರಂಥ ಸಾಹಿಬ್ (Guru Granth Sahib)ನ ಕೆಲವು ಪುಟ ಹರಿದ ಯುವಕನನ್ನು ಥಳಿಸಿ ಕೊಂದಿರುವ ಘಟನೆ ನಡೆದಿದೆ.
19 ವರ್ಷದ ಯುವಕನನ್ನು ಹೊಡೆದು ಕೊಂದು ಹಾಕಿದ ಘಟನೆ ಪಂಜಾಬ್ (Punjab) ಫಿರೋಜ್‌ಪುರದ ಗುರುದ್ವಾರದಲ್ಲಿ (Gurudwara) ನಡೆದಿದೆ. ಗ್ರಂಥದ ಪುಟ ಹರಿದ ವ್ಯಕ್ತಿ ಮಾನಸಿಕವಾಗಿ ಬಳಲುತ್ತಿದ್ದ ಎನ್ನಲಾಗಿದೆ. ಬಾಬಾ ಬೀರ್‌ನಲ್ಲಿ ಬಕ್ಷೀಶ್ ಸಿಂಗ್ ಈ ಕೃತ್ಯ ಎಸಗಿದ್ದು, ಉದ್ರಿಕ್ತರಾದ ಜನರು ಆತನನ್ನು ಹಿಡಿದು ಥಳಿಸಿದ್ದಾರೆ ಎನ್ನಲಾಗಿದೆ. ತೀವ್ರವಾಗಿ ಗಾಯೊಂಡಿದ್ದ ಯುವಕ ಸಾವನ್ನಪ್ಪಿದ್ದಾನೆ, ಎಂದು ಉಪ ಪೊಲೀಸ್ ವರಿಷ್ಠ ಸಿಂಗ್ ಸುಖವಿಂದರ್ ಸಿಂಗ್ ಹೇಳಿದ್ದಾರೆ.
ಸಾವನ್ನಪ್ಪಿದ ಯುವಕ ಮಾನಸಿಕ ಅಸ್ವಸ್ಥನಾಗಿದ್ದು ಎರಡು ವರ್ಷಗಳಿಂದ ಔಷಧಿ ಸೇವಿಸುತ್ತಿದ್ದ ಎನ್ನಲಾಗಿದೆ. ಈ ಕುರಿತು ಆತನ ತಂದೆ ಲಖ್ವಿಂದರ್ ಸಿಂಗ್ ಹೇಳಿದ್ದಾರೆ. ಈಗ ಮಗನನ್ನು ಹತ್ಯೆಗೈದವರ ವಿರುದ್ಧ ಪ್ರಕರಣ ದಾಖಲಿಸುವಂತೆ ತಂದೆ ದೂರು ಸಲ್ಲಿಸಿದ್ದಾರೆ. ಜನರು ಆತನನ್ನು ಥಳಿಸಲು ಆರಂಭಿಸಿದಾಗ ಆತ ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದಾನೆ. ಜನರು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.