ಬೆಳಗಾವಿ: ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ಭಾರೀ ಸದ್ದು ಮಾಡುತ್ತಿದೆ. ಈ ವಿಷಯವಾಗಿ ಜಿಲ್ಲೆಯ ಗೋಕಾಕ್ ನಲ್ಲಿ ಮಾತನಾಡಿರುವ ಶಾಸಕ ರಮೇಶ್ ಜಾರಕಿಹೊಳಿ, ಸದ್ಯದಲ್ಲಿಯೇ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿಪರಮೇಶ್ವರ್ ಸಿಡಿ ಬರಬಹುದು ಎಂದು ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಕೇಸ್ ನಲ್ಲಿ ಡಿಕೆಶಿ ಕೈವಾಡವಿದೆ ಎಂದು ಆರೋಪಿಸಿರುವ ಅವರು, ನಾನು ಹಿಂದಿನಿಂದಲೂ ಈ ಕುರಿತು ಹೇಳುತ್ತ ಬಂದಿದ್ದೇನೆ. ಆದರೆ, ಎಲ್ಲರೂ ನನ್ನ ಹೇಳಿಕೆ ನಿರ್ಲಕ್ಷ್ಯ ಮಾಡಿದರು. ಹೀಗೆ ನಿರ್ಲಕ್ಷ್ಯ ಮಾಡಿದರೆ ಸಿಎಂ, ಗೃಹ ಸಚಿವರ ಸಿಡಿ ಬರಬಹುದು ಎಂದು ಹೇಳಿದ್ದಾರೆ. ಇಂತಹ ಸಿಡಿ ವಿಷಯಕ್ಕೆ ಸಿಎಂ, ಗೃಹ ಸಚಿವರು ಪಕ್ಷಾತೀತವಾಗಿ ಅಂತ್ಯ ಹಾಡಬೇಕಿದೆ ಎಂದು ಮನವಿ ಮಾಡಿದ್ದಾರೆ.
ಡಿಕೆಶಿ ನನ್ನ ಪ್ರಕರಣದಲ್ಲಿ ಕೂಡ ನೇರವಾಗಿ ಭಾಗಿಯಾಗಿರುವ ಕುರಿತು ಸಾಕ್ಷ್ಯಾಧಾರಗಳಿವೆ. ಆದರೆ, ಮಾಧ್ಯಮಗಳ ಮುಂದೆ ಈ ಸಾಕ್ಷಿಗಳನ್ನು ನಾನು ಬಿಡುಗಡೆ ಮಾಡುವುದಿಲ್ಲ. ಪ್ರಕರಣವನ್ನು ಸಿಬಿಐಗೆ ನೀಡಿದ್ರೆ ಎಲ್ಲಾ ಸಾಕ್ಷ್ಯ ಕೊಡುತ್ತೇನೆ. ನನ್ನ ಪ್ರಕರಣ ಎಸ್ಐಟಿಗೆ ನೀಡಲಾಗಿದೆ. ಅದರ ಬಗ್ಗೆ ವಿಶ್ವಾಸವಿಲ್ಲ ಎಂದು ಹೇಳಿದ್ದಾರೆ.
ನನ್ನ ಪ್ರಕರಣದ ಗೊಂದಲಕ್ಕೆ ಜೂನ್ 4ರ ನಂತರ ಉತ್ತರ ನೀಡುತ್ತೇನೆ. ಡಿಸಿಎಂ ಡಿಕೆಶಿ ಅಷ್ಟೇ ಅಲ್ಲ, ನಮ್ಮವರು ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.