ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದ ಇನ್ಫೋಸಿಸ್ ಮುಖ್ಯಸ್ಥರು ಹಿಂದೆ ಸರಿದು ಅಚ್ಚರಿ ಮೂಡಿಸಿದ್ದಾರೆ.
ಸಮೀಕ್ಷೆಗೆಂದು ಬಂದ ಗಣತಿದಾರರಿಗೆ
ನೇರವಾಗಿ ನಮ್ಮ ಮನೆ ಸಮೀಕ್ಷೆ ಬೇಡ ಎಂದ ಸುಧಾ ಮೂರ್ತಿ ದಂಪತಿಗಳು ಹೇಳಿದ್ದಾರೆ.
ಇನ್ಫೋಸಿಸ್ ಮುಖ್ಯಸ್ಥರಾದ ನಾರಾಯಣ ಮೂರ್ತಿ ಹಾಗೂ ಸುಧಾ ನಾರಾಯಣ ಮೂರ್ತಿ ಸಮೀಕ್ಷೆಯಲ್ಲಿ ಭಾಗಿಯಾಗಲು ನಿರಾಕರಣೆ ತೋರಿದ್ದು, ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಮೀಕ್ಷೆಗೆ ನಾವು ಸೇರುವುದಿಲ್ಲ, ನಾವೂ ಯಾವುದೇ ಹಿಂದುಳಿದ ಜಾತಿಗೆ ಸೇರಿಲ್ಲ ಎಂದು ಹಿಂಬರಹ ಕೊಟ್ಟಿದ್ದಾರೆ.
ಸಮೀಕ್ಷೆಗೆ ಬಂದ ಗಣತಿದಾರರ ಸಮೀಕ್ಷೆ ಪತ್ರದಲ್ಲೆ ಬರೆದು ಸುಧಾಮೂರ್ತಿ ಸಹಿ ಮಾಡಿ ಕೊಟ್ಟಿದ್ದಲ್ಲದೇ, ಈ ಸಮೀಕ್ಷೆ ಸರಕಾರಕ್ಕೆ ಯಾವುದೇ ಉಪಯೋಗವಿಲ್ಲ. ಹೀಗಾಗಿ ನಾವೂ ಇದರಲ್ಲಿ ಭಾಗವಹಿಸುವುದಿಲ್ಲ ಎಂದು ಸ್ವಯಂ ದೃಢೀಕರಣ ಪತ್ರದ ಮೂಲಕ ಉತ್ತರ ಕೊಟ್ಟಿರುವುದು ಈಗ ಸಾಮಾಜಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

