ಬಳ್ಳಾರಿ: ಶ್ರೀರಾಮುಲು ಜೈಲಿಗೆ ಹೋಗುವ ಪರಿಸ್ಥಿತಿ ಬರುತ್ತದೆ. ವಾಲ್ಮೀಕಿ ನಿಗಮದಲ್ಲಿನ ಅಕ್ರಮ ಕೋವಿಡ್ ಕಿಟ್ ಖರೀದಿಯಲ್ಲಿನ ಭಷ್ಟಾಚಾರ ನಡೆದಿದೆ. ಇದೇ ವಿಚಾರದಲ್ಲಿ ಶ್ರೀ ರಾಮುಲು ಜೈಲು ಸೇರಲಿದ್ದಾರೆ ಎಂದು ಮಾಜಿ ಸಚಿವ ನಾಗೇಂದ್ರ ಶ್ರೀರಾಮುಲು ವಿರುದ್ಧ ಹರಿಹಾಯ್ದಿದಾರೆ.
ಪದೇ ಪದೇ ನಾನು ಜೈಲಿಗೆ ಹೊಗುತ್ತೇನೆ ಎನ್ನುವ ಶ್ರೀರಾಮುಲು ಅವರೇ ಜೈಲು ಸೇರಲಿದ್ದಾರೆ. ವಾಲ್ಮೀಕಿ ಹಗರಣದಲ್ಲಿ ಕುತಂತ್ರದಿಂದ ಬಿಜೆಪಿ ನಾಯಕರು ನನ್ನನ್ನು ಸಿಲಿಕಿಸಿದ್ದರು. ಇಲ್ಲ ಸಲ್ಲದ ಆರೋಪ ಮಾಡಿದ ಹಿನ್ನೆಲೆ ಸಚಿವ ಸ್ಥಾನದಿಂದ ದೂರ ಉಳಿಯುವಂತಾಯಿತು. ನಾನು ಜೈಲಿಗೆ ಹೋಗುತ್ತೇನೆ ಎಂದು ರಾಮುಲು ಪದೇ ಪದೇ ಹೇಳುತ್ತಾರೆ. ಆದರೆ ಅವರೇ ಜೈಲಿಗೆ ಹೋಗುವ ದಿನ ಬರುತ್ತದೆ. ಮತ್ತೊಮ್ಮೆ ನಾನು ಸಚಿವನಾಗಿ ಬರುವೆ ಎಂದು ಅವರು ಹೇಳಿದ್ದಾರೆ.
ಎಸ್ಟಿ ಕೋವಿಡ್ ಕಿಟ್ ಖರೀದಿ ತನಿಖೆ ಮಾಡಿಸುತ್ತೇವೆ. ಶ್ರೀರಾಮುಲು ಸಹ ಜೈಲಿಗೆ ಹೋಗುವ ಪರಿಸ್ಥಿತಿ ಬರುತ್ತದೆ. ನಾನು ಶ್ರೀರಾಮುಲುನ ಜೈಲಿಗೆ ಕಳುಹಿಸುವುದಲ್ಲ. ನಮ್ಮ ಕಾನೂನಿನ ವ್ಯವಸ್ಥೆಯೇ ಶ್ರೀರಾಮುಲು ಅವರನ್ನು ಜೈಲಿಗೆ ಕಳುಹಿಸುತ್ತದೆ ಎಂದಿದ್ದಾರೆ.
ಬಳ್ಳಾರಿ ಎಂದರೆ ನಾನೋಬ್ಬನೇ ಇರಬೇಕು ಎನ್ನುವ ಅಹಂಕಾರ ಶ್ರೀರಾಮುಲುವಿಗಿದೆ. ಎರಡು ಬಾರಿ ಸೋತು ಸುಣ್ಣಾವಾದರೂ ಶ್ರೀರಾಮುಲುಗೆ ಬುದ್ದಿ ಬಂದಿಲ್ಲ. ನೀವು ಆಸೆ ಪಟ್ಟಿರುವ ಡಿಸಿಎಂ ಹುದ್ದೆಯನ್ನು ನಿಮಗಿಂತಲೂ ಮುನ್ನ ನಾನು ಅಲಂಕಾರಿಸುವೆ. ನಿಮಗೆ ಸವಾಲು ಹಾಕುತ್ತೇನೆ. ನಿಮಗಿಂತ ಮುಂಚೆಯೇ ಇನ್ನೂ ದೊಡ್ಡ ಹುದ್ದೆಗೆ ಹೋಗುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭವಿಷ್ಯದಲ್ಲಿ ನಾನು ಡಿಸಿಎಂ ಅಷ್ಟೇ ಅಲ್ಲ. ಸಿಎಂ ಕೂಡ ಆಗಬಹುದು. ಅದಕ್ಕೆ ನಮ್ಮ ಪಕ್ಷ ಅವಕಾಶ ನೀಡಲಿದೆ. ಬಳ್ಳಾರಿ ಜಿಲ್ಲೆ ಐದು ಕೇತ್ರದಲ್ಲಿ ಕಾಂಗ್ರೆಸ್ ಭದ್ರವಾಗಿ ಇರಲಿದೆ. ಸಚಿವ ಸ್ಥಾನ ನೀಡುವುದು ಸಿಎಂ, ಡಿಸಿಎಂ ಪಕ್ಷ ಹೈಕಮೆಂಡ್ ನಿರ್ಧರಿಸಲಿದ್ದಾರೆ. ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈವರೆಗೆ ನನಗೆ ನೋಟೀಸ್ ನೀಡಿಲ್ಲ. ನಿಗಮದ 84.75 ಕೋಟಿ ರೂ ವಾಪಸ್ ಬಂದಿದೆ. ತನಿಖೆ ಎಷ್ಟೇ ನಡೆಯಲಿ. ತನಿಖಾ ಸಂಸ್ಥೆ ದುರ್ಬಳಕೆ ಮಾಡಿಕೊಂಡು ಬಳ್ಳಾರಿ ಶಾಸಕರ ಮೇಲೆ ಇಡಿ ದಾಳಿ ಮಾಡಿಸಲಾಗುತ್ತಿದೆ. ಜನಾರ್ದಾನ ರೆಡ್ಡಿ ಶ್ರೀರಾಮುಲು ಒಂದಾಗಿರೋ ವಿಚಾರ ಬಗ್ಗೆ ಮಾತಾಡಲ್ಲ. ಅವರೇ ಜಗಳವಾಡಿದರು ಈಗ ಒಂದಾಗಿದ್ದಾರೆ. ಹಿಂದೆ ಅವರಿಬ್ಬರೂ ನನ್ನ ಸ್ನೇಹಿತರು. 2028ಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ಲ್ಯಾನ್ ನಡೆಯುತ್ತದೆ ಎಂದಿದ್ದಾರೆ.