ಚಿಕ್ಕಬಳ್ಳಾಪುರ: ಶಿಕ್ಷಕರೊಬ್ಬರಿಗೆ ಬೆತ್ತಲೆಯ ವಿಡಿಯೋ ಕಳುಹಿಸಿ ಲಕ್ಷ ಲಕ್ಷ ವಂಚಿಸಿರುವ ಘಟನೆ ನಡೆದಿದೆ.
ಚರ್ಮರೋಗ ಕಾಯಿಲೆ ವಾಸಿಗೆಂದು ಫೇಸ್ ಬುಕ್ ನಲ್ಲಿ ಸಿಕ್ಕ ಲಿಂಕ್ ನ್ನು ಬಳಸಿ ಶಿಕ್ಷಕಿ ಅರೆಬೆತ್ತಲೆಯಾಗಿದ್ದನ್ನೇ ಬಂಡವಾಳ ಮಾಡಿಕೊಂಡು ಸಂಪೂರ್ಣ ಬೆತ್ತಲೆ ವಿಡಿಯೋ ಕಳುಹಿಸಿ ಆತನಿಂದ ದುಷ್ಕರ್ಮಿಗಳು 9 ಲಕ್ಷದ 99 ಸಾವಿರ ರೂ. ಹಣ ಪಡೆದು ಬ್ಲಾಕ್ ಮೇಲ್ ಮಾಡಿದ್ದಾರೆ.
ಗೌರಿಬಿದನೂರು ನಗರವಾಸಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿ.ಜಗದೀಶ್ ಈ ರೀತಿ ವಂಚನೆಗೊಳಗಾದವರು. ಶಿಕ್ಷಕ ಜಗದೀಶ್ ಗೆ ಸೋರಿಯಾಸಿಸ್ ಎನ್ನುವ ಚರ್ಮರೋಗ ಇತ್ತು. ಸೋರಿಯಾಸಿಸ್ ಕಾಯಿಲೆಗೆ ಚಿಕಿತ್ಸೆ ನೀಡುವುದಾಗಿ ಫೇಸ್ ಬುಕ್ ನಲ್ಲಿ ಲಿಂಕ್ ಹರಿದಾಡುತ್ತಿತ್ತು. ಲಿಂಕ್ ನವರು ಹೇಳಿದಂತೆ ಅರೆಬೆತ್ತಲಾಗಿ ಜಗದೀಶ ವಿಡಿಯೋ ಕಳಿಸಿದ್ದಾನೆ.
ವಿಡಿಯೋವನ್ನು ಬಳಸಿಕೊಂಡು ಶಿಕ್ಷಕನ ನಕಲಿ ಬೆತ್ತಲೆ ವಿಡಿಯೋ ಸೃಷ್ಠಿಸಿದ್ದಾರೆ. ಇದನ್ನು ಬಳಸಿಕೊಂಡು ವಂಚಿಸಿದ್ದಾರೆ. ಮೋಸ ಹೋಗಿರುವುದನ್ನು ಅರಿತುಕೊಂಡ ಶಿಕ್ಷಕ ಜಗದೀಶ್ ನ್ಯಾಯ ಕೊಡಿಸುವಂತೆ ಚಿಕ್ಕಬಳ್ಳಾಪುರ ಸೈಬರ್ ಠಾಣೆಯ ಮೆಟ್ಟಿಲೇರಿದ್ದಾರೆ.