ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಸಿಗದಿದ್ದವರು ಮುನಿಸಿಕೊಳ್ಳುವುದು ಸಾಮಾನ್ಯ. ಆ ನಂತರ ನಾಯಕರ ಮಧ್ಯಸ್ಥಿತಿಕೆಯಿಂದಾಗಿ ಎಲ್ಲವೂ ಶಮನವಾಗಿ ಮುನಿಸು ಮರೆಯುತ್ತಾರೆ. ಆದರೆ, ಹಿರಿಯ ನಾಯಕರೇ ಇಲ್ಲಿ ಮುನಿಸಿಕೊಂಡು ಕುಳಿತಿದ್ದಾರೆ.
ಕೆ.ಎಚ್. ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಮುನಿಸಿಕೊಂಡು ಪ್ರಚಾರಕ್ಕೆ ಹೋಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಕೂಡ ಈಗಾಗಲೇ ಅಲ್ಲಿ ಪ್ರಚಾರ ನಡೆಸಿದ್ದಾರೆ. ಆದರೆ, ಮುನಿಯಪ್ಪ ಬೇಸರಗೊಂಡು ಪ್ರಚಾರಕ್ಕೆ ಹೋಗಿಲ್ಲ. ಅವರ ಮಗಳು ಹಾಗೂ ಶಾಸಕಿ ರೂಪಕಲಾ ಕೂಡ ಆ ಕಡೆ ತಿರುಗಿ ನೋಡಿಲ್ಲ.
ಕೋಲಾರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ರಮೇಶ್ ಕುಮಾರ್ ಬಣ ಹಾಗೂ ಮುನಿಯಪ್ಪ ಬಣದ ಮಧ್ಯೆ ದೊಡ್ಡ ಜಗಳವೇ ನಡೆದಿತ್ತು. ಹಲವು ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಹಲವು ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದರು. ಬಹಿರಂಗವಾಗಿಯೇ ನಾವು ವಿರೋಧ ಮಾಡುತ್ತೇವೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಟಿಕೆಟ್ ನ್ನು ಬದಲಾಯಿಸಿತು. ಹೀಗಾಗಿ ಕೋಪಗೊಂಡಿರುವ ಮುನಿಯಪ್ಪ ಅಭ್ಯರ್ಥಿ ಪ್ರಚಾರಕ್ಕೆ ತೆರಳಿಲ್ಲ.
ಕಾಂಗ್ರೆಸ್ ಅಭ್ಯರ್ಥಿ ಅಭ್ಯರ್ಥಿ ಕೆವಿ ಗೌತಮ್ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕೂಡ ಸುರ್ಜೇವಾಲಾ ಅವರ ಒತ್ತಾಯಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಮುನಿಯಪ್ಪ ಹಾಗೂ ರೂಪಕಲಾ ಆಗಮಿಸಿದ್ದರು. ಕೋಲಾರದಲ್ಲಿ ಅಭ್ಯರ್ಥಿಯ ಸೋಲು-ಗೆಲುವು ನನಗೆ ಸಂಬಂಧಪಟ್ಟಿದ್ದಲ್ಲ ಅದು ಭೈರತಿ ಸುರೇಶ್ ಹಾಗೂ ಶಾಸಕರಿಗೆ ಸಂಬಂಧಿಸಿದ್ದು ಎಂದು ಹೇಳಿದ್ದಾರೆ.