ಮಂಗಳೂರು: ಸೋಫಾದ ಮೇಲೆ ಶರ್ಟ್ ಇಟ್ಟ ಹಿನ್ನೆಲೆಯಲ್ಲಿ ಪಾಪಿ ಸೊಸೆಯೊಬ್ಬಳು ವೃದ್ಧ ಮಾವನ ಮೇಲೆ ಹಲ್ಲೆ ನಡೆಸಿರುವ ಅಮಾನವೀಯ ಘಟನೆಯೊಂದು ನಡೆದಿದೆ.
ಈ ಘಟನೆ ನಗರದಲ್ಲಿ ನಡೆದಿದೆ. ಸೊಸೆ ಉಮಾಶಂಕರಿ ಎಂಬ ಮಹಿಳೆಯೇ ಹಲ್ಲೆ ನಡೆಸಿದವಳು. ಮಾವ ಪದ್ಮನಾಭ ಸುವರ್ಣ(87) ಎಂಬುವವರ ಮೇಲೆಯೇ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ವೃದ್ಧ ಮಾವ ತಮ್ಮ ಶರ್ಟ್ ನ್ನು ಸೋಫಾದ ಮೇಲೆ ಇಟ್ಟಿದ್ದಕ್ಕೆ ಕೋಪಗೊಂಡ ಸೊಸೆ ‘ಹೋಗಿ ಸಾಯಿ’ ಎಂದು ಹಲ್ಲೆ ನಡೆಸಿದ್ದಾಳೆ.
ಈ ಮಹಿಳೆಯ ಪತಿ ವಿದೇಶದಲ್ಲಿದ್ದು, ಮನೆಯಲ್ಲಿ ಮಾವ, ಅತ್ತೆ ಇರುತ್ತಿದ್ದರು. ಸಿಸಿಟಿವಿ ಆಧರಿಸಿ ಸದ್ಯ ವೃದ್ಧರ ಮಗಳು ಪ್ರಿಯಾ ಎಂಬುವವರು ಠಾಣೆಗೆ ದೂರು ನೀಡಿದ್ದು, ಕಂಕನಾಡಿ ಪೊಲೀಸರು ಉಮಾಶಂಕರಿಯನ್ನು ಬಂಧಿಸಿದ್ದಾರೆ