ಇಂಗ್ಲೆಂಡ್ ವಿರುದ್ಧ ನಡೆದ 5 ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 4-1 ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರಿಕೆ ಕಂಡಿದೆ.
ಇಲ್ಲಿಯವರೆಗೆ ನ್ಯೂಜಿಲೆಂಡ್ ಮೊದಲ ಸ್ಥಾನದಲ್ಲಿದ್ದರು. ಸದ್ಯ ಭಾರತ ಅಗ್ರವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಆಡಿದ 9 ಪಂದ್ಯಗಳಲ್ಲಿ 6 ಗೆಲುವು ದಾಖಲಿಸಿರುವ ಭಾರತ, ಅಗ್ರಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಈ ಪಟ್ಟಿಯಲ್ಲಿ ನ್ಯೂಝಿಲೆಂಡ್ ತಂಡವು ದ್ವಿತೀಯ ಸ್ಥಾನದಲ್ಲಿದೆ. ಭಾರತ ತಂಡವು 6 ಗೆಲುವು, 2 ಸೋಲು ಮತ್ತು 1 ಡ್ರಾ ಸಾಧಿಸಿದ್ದು, 68.51% ಗೆಲುವಿನ ಶೇಕಾಡವಾರು ಹೊಂದಿದೆ. ನ್ಯೂಜಿಲೆಂಡ್ ತಂಡವು 5 ಪಂದ್ಯಗಳನ್ನಾಡಿ 3 ಪಂದ್ಯಗಳಲ್ಲಿ ಜಯ ಸಾಧಿಸಿದೆ. 2 ಪಂದ್ಯಗಳಲ್ಲಿ ಸೋಲನುಭವಿಸಿದೆ. ಗೆಲುವಿನ ಶೇಕಡಾವಾರು ಹೊಂದಿರುವ ಕಿವೀಸ್ ಪಡೆ ನೂತನ ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
11 ಪಂದ್ಯಗಳನ್ನಾಡಿರುವ ಆಸ್ಟ್ರೇಲಿಯಾ 7 ಜಯ, 3 ಸೋಲು ಹಾಗೂ 1 ಪಂದ್ಯ ಡ್ರಾ ಮಾಡಿಕೊಂಡು 59.09% ಗೆಲುವಿನ ಶೇಕಡಾವಾರು ಹೊಂದಿ, 3ನೇ ಸ್ಥಾನದಲ್ಲಿದೆ.
2 ಪಂದ್ಯಗಳನ್ನಾಡಿರುವ ಬಾಂಗ್ಲಾದೇಶ್ ತಂಡವು 1 ಪಂದ್ಯದಲ್ಲಿ ಗೆದ್ದರೆ, ಮತ್ತೊಂದು ಪಂದ್ಯದಲ್ಲಿ ಸೋತು 50.00% ಗೆಲುವಿನ ಶೇಕಡಾವಾರಿನೊಂದಿಗೆ 4ನೇ ಸ್ಥಾನದಲ್ಲಿದೆ.
ಪಾಕಿಸ್ತಾನ್ 5 ಪಂದ್ಯಗಳನ್ನಾಡಿ 2 ಗೆಲುವು ದಾಖಲಿಸಿದರೆ, 3 ಪಂದ್ಯಗಳಲ್ಲಿ ಸೋಲನುಭವಿಸಿದೆ. 36.66% ಗೆಲುವಿನ ಶೇಕಡಾವಾರು ಹೊಂದಿ 5ನೇ ಸ್ಥಾನದಲ್ಲಿದೆ.