ಮಹಿಳಾ ಪ್ರೀಮಿಯರ್ ಲೀಗ್ನ 17ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ 1 ರನ್ ನಿಂದ ಸೋಲು ಕಂಡಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ಲೇ ಆಫ್ ಗೆ ಪ್ರವೇಶಿಸಿದೆ.
ರಣರೋಚಕ ಪಂದ್ಯದಲ್ಲಿ ಸೋತ ಆರ್ಸಿಬಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೂ, ಪ್ಲೇ ಆಫ್ಗೇರಲು ಹರಸಾಹಸ ಪಡಬೇಕಿದೆ. ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಕೈಗೆತ್ತಿಕೊಂಡರು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಬೆಂಗಳೂರು ತಂಡ ದಿಟ್ಟ ಹೋರಾಟ ನಡೆಸಿತು. 20 ಓವರ್‌ಗಳಲ್ಲಿ 180 ರನ್ ಗಳಿಸಿ 1 ರನ್ ನಿಂದ ಸೋಲು ಕಂಡಿತು. ಹೀಗಾಗಿ ಡೆಲ್ಲಿ ಪ್ಲೇ ಆಫ್ ಗೆ ತಲುಪಿದರೆ, ಬೆಂಗಳೂರು ಇನ್ನೊಂದು ಪಂದ್ಯಕ್ಕಾಗಿ ಕಾಯಬೇಕಾಗಿದೆ.